ಹುಬ್ಬಳ್ಳಿ(ಫೆ.17) ರಾಜ್ಯದಲ್ಲಿ ದೇಶ ವಿರೋಧಿ ಚಟುವಟಿಕೆ ಮತ್ತು ಉಗ್ರಗಾಮಿಗಳ ಪರ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಸುವವರ ಎನ್ ಕೌಂಟರ್‌ಗೆ ಗ್ರಾಮ‌ಪಂಚಾಯಿತಿ‌ ಉಪಾಧ್ಯಕ್ಷರೊಬ್ಬರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಬಂಡಿವಾದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ ಕುಮಾರ ರಡ್ಡೆರ ಎಂಬುವವರೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದವರು. ಹುತಾತ್ಮ ಯೋಧರಿಗೆ ಇಡಿ ದೇಶ ಕಂಬನಿ‌ ಮಿಡಿಯುತ್ತಿರುವಾಗ ರಾಜ್ಯದಲ್ಲಿ ಕೆಲ ದೇಶ ವಿರೋಧಿ ಶಕ್ತಿಗಳು ಪಾಕಿಸ್ತಾನ ಹಾಗೂ ಉಗ್ರಗಾಮಿಗಳನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ರಾಜಾರೋಷವಾಗಿ ಬರೆಯುತ್ತಿದ್ದಾರೆ.  ಇದರಿಂದ ದೇಶದಲ್ಲಿ ಆಂತರಿಕ ಭದ್ರತೆಗೆ ಧಕ್ಕೆಯಾಗುತ್ತಿದೆ. ಇಂತವರನ್ನು ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಾಕಿಸ್ತಾನ್ ಜಿಂದಾಬಾದ್ ಎಂದ  ಬೆಳಗಾವಿ ಶಿಕ್ಷಕಿ

ದೇಶ ವಿರೋಧಿ ಪೋಸ್ಟ್ ಹಾಕುವವರ ಮೇಲೆ ಕಂಡಲ್ಲಿ ಗುಂಡು ಆದೇಶ ನೀಡಬೇಕು ಎಂದು ಪತ್ರದ ಮುಖಾಂತರ ಮನವಿ ಮಾಡಿದ್ದಾರೆ. ಈ ಪತ್ರವನ್ನು ಕಿರಣ ಕುಮಾರ ಅವರ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.