ಬೆಳಗಾವಿ[ಫೆ.16] ಸಾಮಾಜಿಕ ಜಾಲತಾಣದಲ್ಲಿ ಯುವತಿ ದೇಶದ್ರೋಹಿ ಪೋಸ್ಟ್ ಹಾಕಿದ್ದು  ಅವಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಡಬಿ ಶಿವಾಪೂರ ಗ್ರಾಮದ ಯುವತಿಯಿಂದ ದೇಶದ್ರೋಹದ ಪೋಸ್ಟ್ ಹಾಕಿದ್ದಳು.

ಜೀಲೇಕಾ ಮಮದಾಪುರ್ ಎನ್ನುವ ಯುವತಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದು ಪೊಲೀಸರ ವಶದಲ್ಲಿ ಇದ್ದಾಳೆ.  ಪೇಸ್‌ ಬುಕ್ , ವಾಟ್ಸ್ ಆಪ್ ನಲ್ಲಿ   ಪಾಕಿಸ್ತಾನ ಜಿಂದಾಬಾದ್, ಪಾಕಿಸ್ತಾನ ಕಿ ಜೈ ಎಂದು  ಪೋಸ್ಟ್ ಮಾಡಿದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯೋಧರಿಗೆ ನಮನ ಸಲ್ಲಿಸುವಾಗಲೆ ಹಾವೇರಿಯಲ್ಲಿ ಪಾಕ್ ಪರ ಘೋಷಣೆ!

ವಾಟ್ಸ್ ಆಪ್ ಡಿಪಿ ಕೂಡಾ ಯುವತಿ ಇಟ್ಟುಕೊಂಡಿದ್ದಳು. ರೊಚ್ಚಿಗೆದ್ದ ಸ್ಥಳೀಯರು ಯುವತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಯರಗಟ್ಟಿಯಲ್ಲಿ  ಟೈಯರಗೆ  ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸವದತ್ತಿ ತಾಲೂಕಿನ ಕಡಬಿ-ಶಿವಾಪುರ ಗ್ರಾಮದಲ್ಲಿರುವ ಯುವತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಳೆ.