ಅರಮನೆಯೊಳಗೆ ನುಸುಳಲು ಇದೆ ಕಳ್ಳ ಮಾರ್ಗ | ಆವರಣದೊಳಗೆ ನಡೆಯುತ್ತಿದೆ ಭರ್ಜರಿ ವ್ಯಾಪಾರ  | ಅನ್ಯ ಮಾರ್ಗ ಕಂಡರೂ ಕಣ್ಮುಚ್ಚಿ ಕುಳಿತ ಪೊಲೀಸರು

ಮೈಸೂರು (ಅ.10): ವಿಶ್ವವಿಖ್ಯಾತ ಮೈಸೂರು ಅರಮನೆ, ಎಲ್ಲೆಲ್ಲೂ ಖಾಕಿ ಪಡೆಯ ಬಂದೋಬಸ್ತ್​ ಇದೆ. ಶಸ್ತ್ರ ಸಜ್ಜಿತ ಪೊಲೀಸರು ಸದಾ ಕಾವಲು ಕಾಯುತ್ತಿರುವ ಅತೀ ಮುಖ್ಯವಾದ ಜಾಗ ಅದು. ಅಲ್ಲಿಗೆ ಯಾರೊಬ್ಬರು ಅನುಮತಿ ಇಲ್ಲದೆ ಹೋಗಲು ಸಾಧ್ಯವಿಲ್ಲ ಅಂತ ನೀವು ತಿಳಿದುಕೊಂಡಿದ್ದರೆ ಅದು ತಪ್ಪು!!!

Add Asianetnews Kannada as a Preferred SourcegooglePreferred

ಮೈಸೂರು ಅರಮನೆಯ ಕೋಟೆಯೊಳಗೆ ನುಸುಳುವುದು ಕಳ್ಳ ಕಾಕರಿಗೆ ನೀರು ಕುಡಿದಷ್ಟೇ ಸುಲಭ. ಮುಖ್ಯಧ್ವಾರದಲ್ಲಿ ಪ್ರವೇಶ ಮಾಡಲು ಅನುಮತಿ ಸಿಗದ ವ್ಯಾಪಾರಿಗಳು ಅರಮನೆ ಒಳಗೆ ವ್ಯಾಪಾರ ಮಾಡಲು ಕೋಟೆಯಲ್ಲೇ ಕಳ್ಳ ದಾರಿ ಹುಡುಕಿದ್ದಾರೆ!!!

ಕೋಟೆ ಮಾರಮ್ಮ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಕೋಟೆಗೆ ರಂಧ್ರಗಳನ್ನು ಮಾಡಿ ಅಲ್ಲಿಂದ ಒಳಗಡೆಗೆ ವ್ಯಾಪಾರದ ಪದಾರ್ಥಗಳನ್ನು ಸಾಗಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಕಳೆದ ಮೂರು ನಾಲ್ಕು ತಿಂಗಳಿಂದಲೂ ಈ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇದು ಹೀಗೇ ಮುಂದುವರೆದು ಅರಮೆನೆಯೊಳಗೆ ಭಯೋತ್ಪಾದಕರು ನುಗ್ಗಿದರೆ ಏನು ಮಾಡುವುದು ಎಂದು ಸ್ಥಳಿಯರು ಪ್ರಶ್ನಿಸುತ್ತಿದ್ದಾರೆ.