ಮನಕಲುಕಿದ 2ನೇ ತರಗತಿ ಹುಡುಗನ ಪ್ರಬಂಧ-ನಿಮಗೂ ಕಣ್ಣೀರು ತರಿಸದೇ ಇರದು!

Second-Grader Pens Heartfelt Essay About Wishing Cell Phones Were Never Invented
Highlights

2ನೇ ತರಗತಿಯ ವಿದ್ಯಾರ್ಥಿ ಬರೆದ ಪ್ರಬಂಧ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಮೊಬೈಲ್ ಫೋನ್ ಕುರಿತು ಬರೆದಿರುವ ಈ ಪ್ರಬಂಧ ಶಾಲಾ ಶಿಕ್ಷಕಿಗೆ ಮಾತ್ರವಲ್ಲ ಎಲ್ಲರ ಮನಕಲುಕಿದೆ.

ಅಮೇರಿಕಾ(ಜೂನ್.2): ಶಾಲಾ ಮಕ್ಕಳ ಪ್ರಬಂಧ, ಉತ್ತರ ಪತ್ರಿಕೆ ಕೆಲವೊಮ್ಮೆ ಬಾರಿ ಸದ್ದು ಮಾಡುತ್ತೆ. ಇದೇ ರೀತಿ ಅಮೇರಿಕಾದ ಲೂಸಿಯಾನ ಎಲಿಮೆಂಟರಿ ಶಾಲೆಯಲ್ಲಿ 2ನೇ ತರಗತಿ ಹುಡುಗನೊಬ್ಬನ ಪ್ರಬಂಧ ಟೀಚರ್ ಮನಕಲುಕಿದೆ. ಲೂಲಿಯಾನ ಎಲಿಮೆಂಟರಿ ಶಾಲಾ ಶಿಕ್ಷಕಿ ಜೆನ್ ಆಡಮ್ ಬೆಸನ್ ವಿದ್ಯಾರ್ಥಿಗಳನ್ನ ಪ್ರಬಂಧ ಬರೆಯಲು ಹೇಳಿದ್ದಾರೆ. ಇಷ್ಟೇ ಅಲ್ಲ ಎಲ್ಲಾ ವಿದ್ಯಾರ್ಥಿಗಳು ಜಗತ್ತಿನಲ್ಲಿ ಆವಿಷ್ಕಾರ ಮಾಡಲೇಬಾರದ ಒಂದು ವಸ್ತು ಹಾಗೂ ಯಾಕೆ ಎಂಬ ಕುರಿತು ಪ್ರಬಂಧ ಬರೆಯಲು ಸೂಚಿಸಿದ್ದಾರೆ. 

ತರಗತಿಯ 21 ವಿದ್ಯಾರ್ಥಿಗಳು ಪ್ರಬಂಧ ಬರೆದು ಶಿಕ್ಷಕಿಗೆ ನೀಡಿದ್ದಾರೆ. ಆದರೆ ಒರ್ವ ವಿದ್ಯಾರ್ಥಿಯ ಪ್ರಬಂಧ ಜೆನ್ ಆಡಮ್ ಶಿಕ್ಷಕಿಗೆ ಆಘಾತ ನೀಡಿದೆ. ಅಷ್ಟಕ್ಕೂ ಆ 2ನೇ ತರಗತಿ ವಿದ್ಯಾರ್ಥಿ ಬರೆದ ಪ್ರಬಂಧ ಮೊಬೈಲ್ ಫೋನ್ ಕುರಿತಾಗಿ. ಈ ಜಗತ್ತಿನಲ್ಲಿ ಆವಿಷ್ಕಾರ ಮಾಡಬಾರದ್ದಾಗಿದ್ದ ಒಂದು ವಸ್ತು ಮೊಬೈಲ್. ನನಗೆ  ಫೋನ್ ಅಂದರೆ ಇಷ್ಟವಿಲ್ಲ. ಯಾಕೆಂದರೆ ನನ್ನ ಪೋಷಕರು ಪ್ರತಿದಿನ ಫೋನ್‌ನಲ್ಲೇ ಇರುತ್ತಾರೆ. ಅವರ ಜಗತ್ತು ಫೋನ್ ಆಗಿದೆ. ಅದು ಕೆಟ್ಟ ಅಭ್ಯಾಸ ಕೂಡ ಹೌದು. ನಾನು ನನ್ನ ತಾಯಿಯ ಫೋನ್ ದ್ವೇಷಿಸುತ್ತೇನೆ. ನನ್ನ ಪ್ರಕಾರ ಫೋನ್ ಕಂಡುಹಿಡಿಯಲೇ ಬಾರದಾಗಿತ್ತು ಎಂದು 2ನೇ ತರಗತಿ ವಿದ್ಯಾರ್ಥಿ ಪ್ರಬಂಧದಲ್ಲಿ ಬರೆದಿದ್ದಾನೆ.

ವಿದ್ಯಾರ್ಥಿಯ ಪ್ರಬಂಧ ನೋಡಿದ ಶಿಕ್ಷಕಿಗೆ ಒಂದು ಕ್ಷಣ ಎನೂ ತೋಚಿಲ್ಲ. ಬಳಿಕ ಸುಧಾರಿಸಿಕೊಂಡು ವಿದ್ಯಾರ್ಥಿಯ ಪ್ರಬಂಧವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕಲೆವೇ  ಕ್ಷಣಗಳಲ್ಲಿ ಈ ಪ್ರಬಂಧ ವೈರಲ್ ಆಗಿದೆ. ಇದು ಎಲ್ಲಾ ಪೋಷಕರಿಗೂ ಕಿವಿ ಮಾತಾಗಿದೆ. 

loader