ನವದೆಹಲಿ[ಜೂ.15]: ಎನ್‌ಡಿಟೀವಿಯ ಮುಖ್ಯ ಪ್ರವರ್ತಕರಾದ ಪ್ರಣಯ್‌ ರಾಯ್‌ ಮತ್ತು ಅವರ ಪತ್ನಿ ರಾಧಿಕಾ ರಾಯ್‌ ಎರಡು ವರ್ಷಗಳ ಕಾಲ ಷೇರುಪೇಟೆ ಪ್ರವೇಶ ಮಾಡದಂತೆ ಸೆಬಿ[ಭಾರತದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್] ನಿಷೇಧ ಹೇರಿದೆ.

ಅಲ್ಲದೆ ಈ ಇಬ್ಬರೂ ಕಂಪನಿಯಲ್ಲಿ ಆಡಳಿತ ಮಂಡಳಿ ಸೇರಿದಂತೆ ಯಾವುದೇ ಹುದ್ದೆಯನ್ನು ವಹಿಸಿಕೊಳ್ಳುವಂತಿಲ್ಲ ಎಂದೂ ಸೂಚಿಸಿದೆ. ಅಲ್ಲದೆ ಇತರೆ ಯಾವುದೇ ಕಂಪನಗಳ ಆಡಳಿತ ಮಂಡಳಿಯನ್ನೂ ಒಂದು ವರ್ಷಗಳ ಕಾಲ ಸೇರದಂತೆ ನಿಷೇಧಿಸಿದೆ.

ಕಂಪನಿಯ ಮೂರು ಸಾಲ ಒಪ್ಪಂದ ಸಂಬಂಧ, ಸಣ್ಣ ಷೇರುದಾರರನ್ನು ಕತ್ತಲಿಲ್ಲ ಇಟ್ಟಿದ್ದ ಹಿನ್ನೆಲೆಯಲ್ಲಿ ಸೆಬಿ ಈ ಶಿಸ್ತು ಕ್ರಮ ಕೈಗೊಂಡಿದೆ.