ಭಾರತ ಮತ್ತು ಪಾಕಿಸ್ತಾನ ಗಡಿಯನ್ನು ಮುಚ್ಚುವುದು ತಕ್ಷಣದ ಆದ್ಯತೆಯಾಗಿದೆ ಎಂದಿರುವ ಬಿಎಸ್’ಎಫ್ ಮುಖ್ಯಸ್ಥ, ಜಮ್ಮು ಸೆಕ್ಟರ್’ನಲ್ಲಿ ಸ್ಮಾರ್ಟ್ ಬೇಲಿಯನ್ನು ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಗಡಿಯನ್ನು ಮುಚ್ಚುವುದು ತಕ್ಷಣದ ಆದ್ಯತೆಯಾಗಿದೆ ಎಂದಿರುವ ಬಿಎಸ್’ಎಫ್ ಮುಖ್ಯಸ್ಥ, ಜಮ್ಮು ಸೆಕ್ಟರ್’ನಲ್ಲಿ ಸ್ಮಾರ್ಟ್ ಬೇಲಿಯನ್ನು ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮುಂದಿನ ವರ್ಷ ಮಾರ್ಚ್’ನೊಳಗೆ ಜಮ್ಮು ಸೆಕ್ಟರ್’ನಲ್ಲಿ ತಂತ್ರಜ್ಞಾನ ಆಧಾರಿತ ಬೇಲಿಯನ್ನು ನಿರ್ಮಿಸಲಾಗುವುದು ಎಂದು ಬಿಎಸ್’ಎಫ್ ಮಹಾನಿರ್ದೇಶಕ ಕೆ,ಕೆ. ಶರ್ಮಾ ತಿಳಿಸಿದ್ದಾರೆ.
ಈ ಕಡೆ ಬಾಂಗ್ಲಾ ದೇಶದೊಂದಿಗೆ ಸಂಬಂಧ ಉತ್ತಮವಾಗಿದೆಯೆಂದಿರುವ ಶರ್ಮಾ, ಸಂಪನ್ಮೂಲಗಳು ಲಭ್ಯವಾಗಿದ್ದಲ್ಲಿ ಪೂರ್ವ ಗಡಿಯನ್ನು ಕೂಡಾ ಇನ್ನಷ್ಟು ಸುರಕ್ಷಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಗಡಿಯ ಮೂಲಕ ದೇಶದೊಳಗೆ ನುಸುಳಲು ಉಗ್ರರು ಸದಾ ತಯಾರಾಗಿರುತ್ತಾರೆ. ಆದರೆ ಕಳೆದ ವರ್ಷದಿಂದ ಉಗ್ರರಿಗೆ ಗಡಿಯೊಳಗೆ ನುಸುಳಲು ಸಾಧ್ಯವಾಗಿಲ್ಲವೆಂದು ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
