ನವದೆಹಲಿ (ಸೆ.24): ಸುಪ್ರೀಂಕೋರ್ಟ್ ಭಾರತದ ಸರ್ವೋಚ್ಚ ನ್ಯಾಯಾಲಯವಾಗಿದ್ದು ಇದು ನೀಡುವ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ತ್ರಿನವುಕರಸರ್ ಇಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಭಯ ರಾಜ್ಯಗಳ ಕಾವೇರಿ ವಿಚಾರದ ಮೇಲುಸ್ತುವಾರಿ ನೋಡಿಕೊಳ್ಳಲು ಪ್ರಾಧಿಕಾರ ರಚನೆ ಮಾಡಲು ಸುಪ್ರೀಂ ಸೂಚಿಸಿದೆ. ಈ ಸೂಚನೆಯನ್ನು ಪಾಲಿಸಬೇಕು ಎಂದಿದ್ದಾರೆ.

ಪಕ್ಷ ಯಾವುದೇ ಇರಲಿ, ರಾಜ್ಯ ಯಾವುದೇ ಇರಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಜ್ಯಕ್ಕೆ ಯಾವುದೇ ಸಮಸ್ಯೆಯಿರಬಹುದು ಸುಪ್ರೀಂ ತೀರ್ಮಾನವನ್ನು ಪಾಲಿಸದೇ ಬೇರೆ ದಾರಿಯಿಲ್ಲ ಎಂದು ತ್ರಿನವುಕರಸರ್ ಹೇಳಿದ್ದಾರೆ.