5 ರಾಜ್ಯಗಳ ವಿಧಾನಸಭೆಗಳಿಗೆ ಫೆ.4 ರಂದು ಮತದಾನ ಆರಂಭವಾಗಲಿದೆ, ಆದುದರಿಂದ ಫೆ.1 ರಂದು ಬಜೆಟನ್ನು ಮಂಡಿಸವುದರಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ, ಎಂದು ಅರ್ಜಿದಾರರು ವಾದಿಸಿದ್ದರು.

ನವದೆಹಲಿ (ಜ.23): ಪಂಚರಾಜ್ಯಗಳಿಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್ ಮಂಡನೆಯ ದಿನಾಂಕವನ್ನು ಮುಂದೂಡಬೇಕೆಂದು ಕೋರಿರುವ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

5 ರಾಜ್ಯಗಳ ವಿಧಾನಸಭೆಗಳಿಗೆ ಫೆ.4 ರಂದು ಮತದಾನ ಆರಂಭವಾಗಲಿದೆ, ಆದುದರಿಂದ ಫೆ.1 ರಂದು ಬಜೆಟನ್ನು ಮಂಡಿಸವುದರಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ, ಎಂದು ಅರ್ಜಿದಾರರು ವಾದಿಸಿದ್ದರು.

ಆದರೆ ಮುಖ್ಯ ನಾಯಾಧೀಶ ಜೆ.ಸ್. ಖೆಹರ್ ಹಾಗೂ ನ್ಯಾ. ಡಿ.ವೈ ಚಂದ್ರಾಚೂಡ್ ಅವರನ್ನು ಒಳಗೊಂಡ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.

ಕೇಂದ್ರ ಸರ್ಕಾರದ ಬಜೆಟ್ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂಬುವುದಕ್ಕೆ ಯಾವುದೇ ಉದಾಹರಣೆಯಿಲ್ಲ, ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.