ನವದೆಹಲಿ(ಮಾ.12): 2ಜಿ ಹಗರಣದ ಬಗ್ಗೆ ಗರಂ ಆಗಿರುವ ಸುಪ್ರಿಂ ಕೋರ್ಟ್ ಇನ್ನು 6 ತಿಂಗಳಲ್ಲಿ ಹಗರಣ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಇತ್ಯರ್ಥಗೊಳಿಸುವಂತೆ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿಗೆ ಸೂಚಿಸಿವೆ.

ವಿಚಾರಣೆ ನಡೆಸಿದ ಅರುಣ್ ಮಿಶ್ರಾ ಹಾಗೂ ನವೀನ್ ಸಿನ್ಹಾ ನೇತೃತ್ವದ ಪೀಠ 2ಜಿ ಹಗರಣ, ಹಾಗೂ ಅದಕ್ಕೆ ಸಂಬಂಧಿಸಿದ ಏರ್'ಸೆಲ್-ಮ್ಯಾಕ್ಸಿಸ್ ಒಪ್ಪಂದಗಳನ್ನು ತನಿಖೆ ನಡೆಸುವಂತೆ ಸೂಚಿಸಿದೆ. ವಿಚಾರಣೆಗಳು ಧೀರ್ಘ ಸಮಯಪಡೆದುಕೊಂಡರೆ ಸಾಮಾನ್ಯ ಜನತೆ ನಂಬಿಕೆ ಕಳೆದುಕೊಳ್ಳುತ್ತಾರೆ' ಎಂದು ಆತಂಕ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ 2ಜಿ ಹಗರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ನೇಮಿಸಲಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಆನಂದ್ ಗ್ರೋವರ್ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದು, ಅದೇ ಸ್ಥಾನಕ್ಕೆ ಹೆಚ್ಚುವರಿ ಸಾಲಿಟರಲ್ ಜನರಲ್ ತುಶಾರ್ ಮೆಹತ್ ಅವರನ್ನು ನಿಯೋಜಿಸಿದೆ.