ಸೆಕ್ಷುವಲ್ ವಿಡಿಯೋಗಳು ಅಂತರ್ಜಾಲ ತಾಣಗಳಿಗೆ ಅಪ್ ಲೋಡ್ ಆಗುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದು ಇದನ್ನು ತಡೆಗಟ್ಟಲು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಲು ಸೂಚಿಸಿದೆ.

ನವದೆಹಲಿ (ಮಾ.22): ಸೆಕ್ಷುವಲ್ ವಿಡಿಯೋಗಳು ಅಂತರ್ಜಾಲ ತಾಣಗಳಿಗೆ ಅಪ್ ಲೋಡ್ ಆಗುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದು ಇದನ್ನು ತಡೆಗಟ್ಟಲು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಲು ಸೂಚಿಸಿದೆ.

ಹಾನಿಕಾರಕ ಅಂಶಗಳನ್ನು ಒಳಗೊಂಡಿರುವ ಅಂತಹ ವಿಡಿಯೋಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ. ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ನಮಗೆ ವರದಿ ಸಲ್ಲಿಸಿ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಸೆಕ್ಷುವಲ್ ವಿಡಿಯೋಗಳು ಹೆಚ್ಚು ಹೆಚ್ಚು ಅಪ್ ಲೋಡ್ ಆಗುತ್ತಿದ್ದು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಇದನ್ನು ತಡೆಗಟ್ಟಲು ಕೇಂದ್ರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ ಎಂದು ಕೋರಿ ಪ್ರಜ್ವಲ ಎನ್ನುವ ಎನ್ ಜಿಓ ಅರ್ಜಿ ಸಲ್ಲಿಸಿತ್ತು. ನ್ಯಾ. ಮದನ್ ಬಿ ಲೋಕೂರ್ ಒಳಗೊಂಡ ಪೀಠ ಿಂದು ಅರ್ಜಿಯ ವಿಚಾರಣೆ ನಡೆಸಿತು.

ಸೆಕ್ಸ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಆಗದಂತೆ, ಅದನ್ನು ಬ್ಲಾಕ್ ಮಾಡುವ ಬಗ್ಗೆ ತಂತ್ರಜ್ಞರ ಜೊತೆ ಮಾತುಕತೆ ನಡೆಸಿ ಎಂದು ಸುಪ್ರೀಂಕೋರ್ಟ್ ನಿನ್ನೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.