ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದ್ದು ಸದ್ಯಕ್ಕೆ ಮುಂದೂಡಿದೆ. ಇಂದು ಬೆಳಿಗ್ಗೆ ಸಭೆ ನಡೆಸಲು ರಾಜ್ಯಪಾಲೆ ಮೃದುಲಾ ಸಿಂಹ ನಿರಾಕರಿಸಿದ್ದರಿಂದ ಮಧ್ಯಾಹ್ನ 1.30 ಕ್ಕೆ  ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ನವದೆಹಲಿ (ಮಾ.14): ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದ್ದು ಸದ್ಯಕ್ಕೆ ಮುಂದೂಡಿದೆ. ಇಂದು ಬೆಳಿಗ್ಗೆ ಸಭೆ ನಡೆಸಲು ರಾಜ್ಯಪಾಲೆ ಮೃದುಲಾ ಸಿಂಹ ನಿರಾಕರಿಸಿದ್ದರಿಂದ ಮಧ್ಯಾಹ್ನ 1.30 ಕ್ಕೆ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ವಿಚಾರಣೆ ವೇಳೆ ಕಾಂಗ್ರೆಸ್ ನ್ಯಾ. ಖೇಹರ್ ರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ನಿಮಗೆ ಬೆಂಬಲ ನೀಡುವ ಶಾಸಕರ ಹೆಸರನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೀರಾ? ಬಿಜೆಪಿ 13 ಸ್ಥಾನಗಳನ್ನು ಗೆದ್ದಿದ್ದರೂ 21 ಶಾಸಕರು ಮನೋಹರ್ ಪರ್ರಿಕರ್ ಗೆ ಬೆಂಬಲ ನೀಡದಿರುವ ಬಗ್ಗೆ ನಿಮ್ಮ ಬಳಿ ಪುರಾವೆಗಳೇನಾದರೂ ಇವೆಯೇ ಎಂದು ಕೇಳಿದರು. ಇದಕ್ಕೆ ಕಾಂಗ್ರೆಸ್ ಇನ್ನೂ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.

ಮಧ್ಯಾಹ್ನ 1.30 ಗೆ ರಾಜ್ಯಪಾಲೆ ಮೃದುಲಾ ಸಿಂಹ ಸಭೆ ಕರೆದಿದ್ದು ಅಲ್ಲಿ ಕಾಂಗ್ರೆಸ್ ಭವಿಷ್ಯ ನಿರ್ಧಾರವಾಗಲಿದೆ.