Asianet Suvarna News Asianet Suvarna News

ವಿಶ್ವದ 50 ಪ್ರಭಾವಿಗಳಲ್ಲಿ ಎಸ್ಬಿಐ ಅಧ್ಯಕ್ಷೆಗೆ ಸ್ಥಾನ

ಈ ಪಟ್ಟಿಯಲ್ಲಿ ಷಿಕಾಗೋ ಕಬ್ಸ್ ಥಿಯೋ ಎಪ್ಸ್ಟೀನ್ ಬೇಸ್‌ಬಾಲ್ ಆಪರೇಶನ್‌ನ ಅಧ್ಯಕ್ಷ ಥಿಯೊ ಎಪ್ಸ್ಟೀನ್ ಮೊದಲ ಸ್ಥಾನ ಪಡೆದಿದ್ದು, ನಂತರದ ಸ್ಥಾನಗಳನ್ನು ಕ್ರಮವಾಗಿ ಅಲಿಬಾಬಾ ಗ್ರೂಪ್ ಮುಖ್ಯಸ್ಥ ಜಾಕ್ ಮಾ, ಪೋಪ್ ಪ್ರಾನ್ಸಿಸ್ ಪಡೆದಿದ್ದಾರೆ.

SBI Chairman among Fortunes 50 greatest leaders of the world

ನ್ಯೂಯಾರ್ಕ್(ಮಾ.24): ವಿಶ್ವ ಪರಿವರ್ತನೆ ಸಾಮರ್ಥ್ಯ ಮತ್ತು ಇತರರ ಮೇಲೆ ಪ್ರಭಾವ ಬೀರುವ ವಿಶ್ವದ 50 ಪ್ರಸಿದ್ಧ ನಾಯಕರ ‘ಫಾರ್ಚ್ಯೂನ್’ ಮ್ಯಾಗಜಿನ್ ಪಟ್ಟಿಯಲ್ಲಿ ಭಾರತದ ಇಬ್ಬರು ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ, ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ 26ನೇ ಸ್ಥಾನ ಮತ್ತು ಲೈಬೀರಿಯಾದಲ್ಲಿ ಲಾಸ್ಟ್‌ಮೈಲ್ ಆರೋಗ್ಯ ಕೇಂದ್ರ ಸ್ಥಾಪಿಸಿರುವ ಭಾರತೀಯ ಮೂಲದ ವೈದ್ಯ ರಾಜ್ ಪಂಜಾಬಿ 28ನೇ ಸ್ಥಾನ ಗಳಿಸಿದ್ದಾರೆ.

ಈ ಪಟ್ಟಿಯಲ್ಲಿ ಷಿಕಾಗೋ ಕಬ್ಸ್ ಥಿಯೋ ಎಪ್ಸ್ಟೀನ್ ಬೇಸ್‌ಬಾಲ್ ಆಪರೇಶನ್‌ನ ಅಧ್ಯಕ್ಷ ಥಿಯೊ ಎಪ್ಸ್ಟೀನ್ ಮೊದಲ ಸ್ಥಾನ ಪಡೆದಿದ್ದು, ನಂತರದ ಸ್ಥಾನಗಳನ್ನು ಕ್ರಮವಾಗಿ ಅಲಿಬಾಬಾ ಗ್ರೂಪ್ ಮುಖ್ಯಸ್ಥ ಜಾಕ್ ಮಾ, ಪೋಪ್ ಪ್ರಾನ್ಸಿಸ್ ಪಡೆದಿದ್ದಾರೆ. ಕೆಟ್ಟ ಸಾಲ ಮತ್ತು ನೋಟು ಅಪನಗದೀಕರಣದ ಹೊರತಾಗಿಯೂ ಎಸ್‌ಬಿಐನಂಥ ಬೃಹತ್ ಸಂಸ್ಥೆಯನ್ನು ಓರ್ವ ಮಹಿಳೆಯಾಗಿರುವ ಭಟ್ಟಾಚಾರ್ಯ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅಲ್ಲದೆ, 2 ಲಕ್ಷ ನೌಕರರನ್ನು ಹೊಂದಿರುವ 211 ವರ್ಷಗಳ ಹಳೆಯ ಬ್ಯಾಂಕ್ ಅನ್ನು ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಪರಿವರ್ತಿಸುತ್ತಿರುವಲ್ಲಿ ಭಟ್ಟಾಚಾರ್ಯ ಅವರ ಕರ್ತವ್ಯ ಮಹತ್ತರದ್ದಾಗಿದೆ ಎಂದು ಫಾರ್ಚ್ಯೂನ್ ಅಭಿಪ್ರಾಯಪಟ್ಟಿದೆ.

Follow Us:
Download App:
  • android
  • ios