ಕರುಳು ಮತ್ತು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ  ಪತಿ ನಟರಾಜನ್’ರವರನ್ನು ಭೇಟಿ ಮಾಡಲು ಎಐಎಡಿಎಂಕೆ ನಾಯಲಿ ಶಶಿಕಲಾ ಇಂದಿನಿಂದ 5 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾರೆ.   

ನವದೆಹಲಿ (ಅ.06): ಕರುಳು ಮತ್ತು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪತಿ ನಟರಾಜನ್’ರವರನ್ನು ಭೇಟಿ ಮಾಡಲು ಎಐಎಡಿಎಂಕೆ ನಾಯಲಿ ಶಶಿಕಲಾ ಇಂದಿನಿಂದ 5 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾರೆ.

ಶಶಿಕಲಾರವರು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣ ಅವರ ಪೆರೋಲ್ ಅರ್ಜಿಯನ್ನು ಅಧಿಕಾರಿಗಳು ನಿರಾಕರಿಸಿದ್ದರು. ನಂತರ ಶಶಿಕಲಾ ಮತ್ತೊಂದು ಅರ್ಜಿ ಸಲ್ಲಿಸಿದ್ದು 5 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅಧಿಕಾರಿಗಳು ಒಪ್ಪಿದ್ದಾರೆ.

ಶಶಿಕಲಾ ಪತಿ ನಟರಾಜನ್ ಚೆನ್ನೈ ಆಸ್ಪತ್ರೆಯಲ್ಲಿ ಕರುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರನ್ನು ಭೇಟಿ ಮಾಡಲು ಇಂದು ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಚೆನ್ನೈಗೆ ಧಾವಿಸಲಿದ್ದಾರೆ. ಶಶಿಕಲಾರವರು ಆಸ್ಪತ್ರೆಗೆ ಮಾತ್ರ ಭೇಟಿ ನೀಡಬೇಕು. ಅಲ್ಲಿ ಯಾರನ್ನೂ ಭೇಟಿ ಮಾಡುವಂತಿಲ್ಲ. ತಾವು ತಂಗಿರುವ ಸ್ಥಳದಲ್ಲಿಯೂ ಯಾರನ್ನೂ ಭೇಟಿ ಮಾಡುವಂತಿಲ್ಲ. ಯಾವುದೇ ರಾಜಕೀಯ ಚಟುವಟಿಕೆಯನ್ನು ನಡೆಸುವಂತಿಲ್ಲವೆಂದು ನಿರ್ಬಂಧ ಹೇರಲಾಗಿದೆ.