ಈ ಸೆಲ್’ನಲ್ಲಿ ಶಶಿಕಲಾ ಭದ್ರತೆಗೆ 10 ಮಂದಿ ಮಹಿಳಾ ಸಿಬ್ಬಂದಿಯನ್ನು ನಿಯೋಜನೆಗೆ ನಿರ್ಧರಿಸಿದ್ದು, 24 ತಾಸು ಶಸ್ತ್ರಸಜ್ಜಿತವಾಗಿ ಕಾರ್ಯನಿರ್ವಸಹಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು (ಫೆ.15): ಆಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರಿಗೆ ಪರಪ್ಪನ ಅಗ್ರಹಾರಾದಲ್ಲಿರುವ ಕೇಂದ್ರ ಕಾರಗೃಹದ ಮಹಿಳಾ ಕೈದಿಗಳ ಬ್ಯಾರೆಕ್’ನಲ್ಲಿ ಬಂಧನದಲ್ಲಿಡಲು ಕಾರಾಗೃಹದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸೆಲ್’ನಲ್ಲಿ ಶಶಿಕಲಾ ಅವರ ಭದ್ರತೆಗೆ 10 ಮಂದಿ ಮಹಿಳಾ ಸಿಬ್ಬಂದಿಯನ್ನು ನಿಯೋಜನೆಗೆ ನಿರ್ಧರಿಸಿದ್ದು, 24 ತಾಸು ಶಸ್ತ್ರಸಜ್ಜಿತವಾಗಿ ಕಾರ್ಯನಿರ್ವಸಹಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ 2014ರಲ್ಲಿ ಶಿಕ್ಷೆಗೆಗೊಳಗಾಗಿದ್ದ ಸಂದರ್ಭದಲ್ಲಿ ನೀಡಲಾಗಿದ್ದ ಸೆಲ್’ನ್ನೇ ಈಗಲೂ ಗೊತ್ತುಪಡಿಸಲಾಗಿದೆ. ಆಗ ಅನಾರೋಗ್ಯ ಕಾರಣಕ್ಕೆ ಜಯಲಲಿತಾ ಅವರು ಮಹಿಳಾ ಬ್ಯಾರೆಕ’ನಲ್ಲಿರುವ ಆಸ್ಪತ್ರೆ ಕಟ್ಟಡದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.