ಮುಖ್ಯಮಂತ್ರಿ ಜಯಾಲಲಿತಾ ಅವರು ನಿಧನಹೊಂದಿದ ಬಳಿಕ ಓ.ಪನ್ನೀರುಸೆಲ್ವಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರೆ, ಜಯಾ ಆಪ್ತೆ ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎರಡು ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದಾರೆ.

ಚೆನ್ನೈ (ಜ. 02): ತಮಿಳುನಾಡಿನ ಮುಖ್ಯಮಂತ್ರಿಯಾಗಿ ಏಐಏಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವ ವಿ.ಕೆ.ಶಶಿಕಲಾ ಅಧಿಕಾರ ವಹಿಸಬೇಕೆಂದು ಪಕ್ಷದ ಹಿರಿಯ ನಾಯಕ ಹಾಗೂ ಲೋಕಸಭೆಯ ಉಪ-ಸಭಾಪತಿ ಎಂ.ತಂಬಿದೊರೈ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಜಯಾಲಲಿತಾ ಅವರು ನಿಧನಹೊಂದಿದ ಬಳಿಕ ಓ.ಪನ್ನೀರುಸೆಲ್ವಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರೆ, ಜಯಾ ಆಪ್ತೆ ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎರಡು ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದಾರೆ.

ಜಯಾಲಲಿತಾರಂತೆ ಶಶಿಕಲಾ ಅವರಿಗೆ ರಾಜ್ಯವನ್ನು ಮುನ್ನಡೆಸುವ ಸಾಮರ್ಥ್ಯ, ಬುದ್ದಿವಂತಿಕೆ ಹಾಗೂ ಜನರ ಬೆಂಬಲವಿದೆ. ಹಾಗಾಗಿ ಅವರು ಮುಖ್ಯಮತ್ರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂದು ತಂಬಿದೊರೈ ಹೇಳಿದ್ದಾರೆ.

ಅಮ್ಮಾ ನಿಧನದ ಬಳಿಕ ಪಕ್ಷದ ಭವಿಷ್ಯದ ಬಗ್ಗೆ ಕಾರ್ಯಕರ್ತರೆಲ್ಲರು ಚಿಂತಾಕ್ರಾಂತರಾಗಿದ್ದೆವು. ಚಿನ್ನಮ್ಮ ದೀಪಸ್ತಂಭದಂತೆ ಬಂದು ಪಕ್ಷವನ್ನು ಕಾಪಾಡಿದ್ದಾರೆ ಎಂದು ತಂಬಿದೊರೈ ಹೇಳಿದ್ದಾರೆ.