ಹಲವು ಸೌಲಭ್ಯಗಳನ್ನು ಬಯಸಿ ಶಶಿಕಲಾ ನ್ಯಾಯಾಧೀಶರಿಗೆ ಮನವಿ ಮಾಡಿದ್ದಳು. ಆದರೆ ಅಂತಿಮ ಶಿಕ್ಷೆಯಾಗಿರುವುದರಿಂದ ಸಾಮಾನ್ಯ ಕೈದಿಯಂತೆಯೇ ಜೈಲುವಾಸ ಅನುಭವಿಸಬೇಕು ಎಂದು ಜಡ್ಜ್ ಚಿನ್ನಮ್ಮನ ಮನವಿಯನ್ನು ನಿರಾಕರಿಸಿದ್ದರು.
ಬೆಂಗಳೂರು(ಫೆ.20): ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾಗೆ ಜೈಲಿನಲ್ಲಿ ರಾಜಾಥಿತ್ಯ ಸಿಗುತ್ತಿದೆಯೇ ? ಅಂತಹದೊಂದು ಅನುಮಾನಗಳು ಹುಟ್ಟಿಕೊಂಡಿದೆ.
ಹಲವು ಸೌಲಭ್ಯಗಳನ್ನು ಬಯಸಿ ಶಶಿಕಲಾ ನ್ಯಾಯಾಧೀಶರಿಗೆ ಮನವಿ ಮಾಡಿದ್ದಳು. ಆದರೆ ಅಂತಿಮ ಶಿಕ್ಷೆಯಾಗಿರುವುದರಿಂದ ಸಾಮಾನ್ಯ ಕೈದಿಯಂತೆಯೇ ಜೈಲುವಾಸ ಅನುಭವಿಸಬೇಕು ಎಂದು ಜಡ್ಜ್ ಚಿನ್ನಮ್ಮನ ಮನವಿಯನ್ನು ನಿರಾಕರಿಸಿದ್ದರು.
ಕೆಲವು ಅಧಿಕೃತ ಮೂಲಗಳ ಪ್ರಕಾರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾಗೆ ಜೈಲು ಅಧಿಕಾರಿಗಳು ಹೈಫೆ ಸೌಲಭ್ಯ ಒದಗಿಸುತ್ತಿದ್ದಾರೆ. ಸಾಮಾನ್ಯ ಸೆಲ್'ನ ಬದಲು ವಿಐಪಿ ಸೆಲ್, ಎಲ್ಇಡಿ ಟಿವಿ, ವಿಶಿಷ್ಟ ಊಟೋಪಚಾರ ವ್ಯವಸ್ಥೆ ನೀಡಲಾಗುತ್ತಿದೆ.ಜೈಲಾಧಿಕಾರಿಗಳ ಫೋನ್ನಲ್ಲೇ ಶಶಿಕಲಾ ತಮ್ಮ ಆಪ್ತರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.