ನಾನು ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ. ನಿನಗೆ ಏನು ತೊಂದರೆ ಆಗೈತಿ. ಸಮಸ್ಯೆ ಇದ್ದರೆ ಪಟ್ಟಿಕೊಡು!ಇದು ಕಲಘಟಗಿ ಕ್ಷೇತ್ರಕ್ಕೆ ಅಪರೂಪದ ಅತಿಥಿಯಾಗಿರುವ ಶಾಸಕ, ಕಾರ್ಮಿಕ ಸಚಿವ ಸಂತೋಷ ಲಾಡ್‌ ಕಾರ್ಯಕರ್ತನಿಗೊಬ್ಬನಿಗೆ ಹೇಳಿರುವ ಮಾತು. ಈ ವಿಡಿಯೋ ಇದೀಗ ವೈರಲ್‌ ಆಗಿದೆ. 

ಹುಬ್ಬಳ್ಳಿ (ಏ. 24): ನಾನು ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ. ನಿನಗೆ ಏನು ತೊಂದರೆ ಆಗೈತಿ. ಸಮಸ್ಯೆ ಇದ್ದರೆ ಪಟ್ಟಿಕೊಡು!

ಇದು ಕಲಘಟಗಿ ಕ್ಷೇತ್ರಕ್ಕೆ ಅಪರೂಪದ ಅತಿಥಿಯಾಗಿರುವ ಶಾಸಕ, ಕಾರ್ಮಿಕ ಸಚಿವ ಸಂತೋಷ ಲಾಡ್‌ ಕಾರ್ಯಕರ್ತನಿಗೊಬ್ಬನಿಗೆ ಹೇಳಿರುವ ಮಾತು. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಚಿವ ಸಂತೋಷ ಲಾಡ್‌ ಮಾತನಾಡುವಾಗ ಕಾರ್ಯಕರ್ತನೊಬ್ಬ ನೀವು ಕಳೆದ ಬಾರಿ ಚುನಾಯಿತರಾದ ಮೇಲೆ ಕ್ಷೇತ್ರಕ್ಕೆ ಬರಲೇ ಇಲ್ಲ ಎಂದು ಪ್ರಶ್ನಿಸಿದ್ದಾನೆ. ಅಷ್ಟಕ್ಕೆ ಕೆಂಡಾಮಂಡಲವಾದ ಸಚಿವರು, ನಾನು ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ. ನಿನಗೆ ಏನು ತೊಂದರೆ. ಸಮಸ್ಯೆ ಇದ್ದರೆ ಪಟ್ಟಿಕೊಡು. ಅವುಗಳನ್ನು ಇತ್ಯರ್ಥ ಪಡಿಸುತ್ತೇನೆ ಎಂದಿದ್ದಾರೆ. ಸಚಿವರ ಉತ್ತರದಿಂದ ಕಾರ್ಯಕರ್ತ ದಂಗಾಗಿ ಕುಳಿತಿದ್ದಾನೆ.

ಈ ಸಭೆ ಯಾವಾಗ ಆಗಿದ್ದು ಗೊತ್ತಿಲ್ಲ. ಆದರೆ ವಿಡಿಯೋ ಇದೀಗ ಫೇಸ್‌ಬುಕ್‌, ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.