ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಅಧಿಕಾರಕ್ಕೆ ಬರುವ ಮೊದಲು ಪ್ರಣಾಳಿಕೆಯಲ್ಲಿ ಎಸಿಬಿ ಕಿತ್ತು ಹಾಕುತ್ತೇನೆ ಎಂದು ಹೇಳಿದ್ದು, ಎಸಿಬಿ ಬಲಪಡಿಸುವುದಾಗಿ ತಿಳಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಎಸಿಬಿಯನ್ನೇ ಮುಂದುವರಿಸುವುದಾಗಿ ಹೈ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ. 

ಲೋಕಾಯುಕ್ತವನ್ನು ಬಲಪಡಿಸುವುದು ಯಾವ ರಾಜಕೀಯ ಪಕ್ಷಗಳಿಗೂ ಬೇಡವಾಗಿದೆ. ರಾಜಕಾರಣಿಗಳು  ಹಾಗೂ ಸರ್ಕಾರದ ವಿರುದ್ಧ ಜನಾಂದೋಲನ ಅಗತ್ಯ ವಾಗಿದೆ ಎಂದು  ಸಂತೋಷ್ ಹೆಗ್ಡೆ ಹೇಳಿದ್ದಾರೆ. 

ಸಿದ್ದರಾಮಯ್ಯ ಅವರು ಬಳ್ಳಾರಿ ಪಾದಯಾತ್ರೆ ಮಾಡಿದರು. ಅಧಿಕಾರಕ್ಕೆ ಬಂದಮೇಲೆ ಲೋಕಾಯುಕ್ತದ ಅಧಿಕಾರ ಕಿತ್ತುಕೊಂಡರು. ಲೋಕಾಯುಕ್ತವನ್ನು ನಿಷ್ಕ್ರೀಯಗೊಳಿಸುವಲ್ಲಿ ಸಫಲರಾದರು.  ಇದೀಗ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವ ಮುನ್ನ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಮೇಲೆ ಬೇರೆ ರೀತಿ ವರ್ತಿಸುತ್ತಿದ್ದಾರೆ.  ರಾಜ್ಯದ ಜನ ಕೈಜೋಡಿಸಿದಾಗ ಮಾತ್ರ ಲೋಕಾಯುಕ್ತ ಬಲಗೊಳಿಸಲು ಸಾಧ್ಯ ಎಂದು ಹೇಳಿದ್ದಾರೆ.