ನವದೆಹಲಿ[ಜು. 30] ಕಾಂಗ್ರೆಸ್ ನಾಯಕ ಸಂಜಯ್ ಸಿಂಗ್ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ.

ಸಂಜಯ್ ಸಿಂಗ್ ಅಸ್ಸಾಂ ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ರಾಜ್ಯಸಭೆಯ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ರಾಜೀನಾಮೆ ನೀಡಿದ್ದು ಅಂಗೀಕಾರ ಆಗಿದೆ.  ಹಿಂದೆ ಬಿಜೆಪಿಯಲ್ಲಿದ್ದ ಸಂಜಯ್ ಸಿಂಗ್ ಉತ್ತರ ಪ್ರದೇಶದ ಅಮೇಥಿಯಿಂದ 90 ರ ದಶಕದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದರು.

ಸಂಪುಟ ವಿಸ್ತರಣೆಗೂ ಮುನ್ನ ಮೂವರ ಟೀಮ್ ರೆಡಿ ಮಾಡ್ಕೊಂಡ BSY

ಇನ್ನು ಸಂಜಯ್ ಸಿಂಗ್ ಅವರ ಪತ್ನಿ ಅಮಿತಾ ಕೂಡಾ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಂಜಯ್ ಸಿಂಗ್ ಮತ್ತು ಅಮಿತಾ ಇಬ್ಬರೂ ಬಿಜೆಪಿ ಸೇರುವ ಘೋಷಣೆ ಮಾಡಿದ್ದಾರೆ.

ನನಗೆ ಗಾಂಧಿ ಕುಟುಂಬದೊಂದಿಗೆ ನಿಕಟ ಸಂಬಂಧವಿದೆ, ಅದು ಮುಂದುವರಿಯಲಿದೆ. ಪ್ರಧಾನಿ ನರೇದ್ರ ಮೋದಿ ದೇಶದ ಅಭಿವೃದ್ಧಿ ಬಗ್ಗೆ ಹಲವಾರು ಕನಸುಗಳನ್ನು ಹೊಂದಿದ್ದು ಅವರ ಜತೆಯಾಗಲು ಬಯಸುತ್ತೇನೆ. ಕಾಂಗ್ರೆಸ್ ಪಕ್ಷದ ಸದ್ಯದ ವಾತಾವರಣ ಬದಲಾವಣೆಯಾಗಿವ ಲಕ್ಷಣ ಕಾಣುತ್ತಿಲ್ಲ ಹಾಗಾಗಿ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.