ಹಾಲು ಗಲ್ಲದ ಆ ಕಂದನಿಗೆ ಇನ್ನು 3 ವರ್ಷ. ಈಜಿಪುರ ಕಟ್ಟಡ ಕುಸಿತದಲ್ಲಿ ಅದೃಷ್ಟವಶಾತ್ ಬದುಕುಳಿದ ಸಂಜನಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಜನಾಗೆ  ಚಿಕಿತ್ಸೆ ನೀಡಲಾಗುತ್ತಿದೆ. 6 ಕೋಟಿ ಕನ್ನಡಿಗರ ಹಾರೈಕೆ ಒಂದೇ ಬದುಕಿ ಬಾ ಸಂಜನಾ.

ಬೆಂಗಳೂರು(ಅ.17): ಹಾಲು ಗಲ್ಲದ ಆ ಕಂದನಿಗೆ ಇನ್ನು 3 ವರ್ಷ. ಈಜಿಪುರ ಕಟ್ಟಡ ಕುಸಿತದಲ್ಲಿ ಅದೃಷ್ಟವಶಾತ್ ಬದುಕುಳಿದ ಸಂಜನಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಜನಾಗೆ ಚಿಕಿತ್ಸೆ ನೀಡಲಾಗುತ್ತಿದೆ. 6 ಕೋಟಿ ಕನ್ನಡಿಗರ ಹಾರೈಕೆ ಒಂದೇ ಬದುಕಿ ಬಾ ಸಂಜನಾ.

Add Asianetnews Kannada as a Preferred SourcegooglePreferred

ಆ ಮಗುವಿಗೆ ಕೇವಲ 3 ವರ್ಷ. ಹೊರ ಜಗತ್ತಿನ ಪರಿವೇ ಇಲ್ಲ. ತನ್ನ ತಂದೆ ತಾಯಿಯೇ ಸರ್ವಸ್ವ. ಆದರೆ ಆ ಸರ್ವಸ್ವವನ್ನು ಕಣ್ಣಮುಂದೆಯೇ ಕಳೆದುಕೊಂಡ ನತದೃಷ್ಟ ಬಾಲೆ. ಆಟವಾಡುವ ಸಮಯದಲ್ಲಿ ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ನಿನ್ನೆ ಬೆಳಗ್ಗೆ ಸಂಭವಿಸಿದ ಈಜೀಪುರ ಕಟ್ಟಡ ಕುಸಿತ ದುರಂತದಲ್ಲಿ ಪವಾಡ ರೀತಿಯಲ್ಲಿ ಬದುಕುಳಿದ ಸಂಜನಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸ್ಫೋಟದ ಬಿಸಿಗೆ ಸಂಜನಾ ದೇಹ ಶೇ.60ರಷ್ಟು ಸುಟ್ಟುಹೋಗಿದೆ. ಹೊರ ಜಗತ್ತಿನ ಪರಿವೇ ಇಲ್ಲದ ಸಂಜನಾ ಬದುಕಿ ಬರಲಿ, ಸಾವು - ಬದುಕಿನ ಯುದ್ಧದಲ್ಲಿ ಸಂಜನಾ ಗೆದ್ದುಬರಲಿ ಎಂಬುದೇ ಎಲ್ಲರ ಆಶಯ.