ನೆಲಮಂಗಲ [ಆ.12]: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಜೊತೆಗೆ ಜಾನುವಾರುಗಳ ಮೂಕರೋದನೆಗೆ ಹಿರಿಯ ಚಿತ್ರನಟಿ ಡಾ.ಎಂ.ಲೀಲಾವತಿ, ಪುತ್ರ ವಿನೋದ್‌ರಾಜ್‌ ಸ್ಪಂದಿಸಿದ್ದಾರೆ.

ಜಾನುವಾರುಗಳಿಗಾಗಿ ಸ್ವಂತ ಖರ್ಚಿನಲ್ಲಿ ಜೋಳದ ಕಡ್ಡಿ ಖರೀದಿ ಮಾಡಿ ಮೇವನ್ನು ಲಾರಿಯಲ್ಲಿ ತುಂಬಿ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕಿನ ಸೋಲದೇವನಹಳ್ಳಿಯಲ್ಲಿ ತಮ್ಮ ಪುತ್ರನೊಟ್ಟಿಗೆ ನೆಲೆಸಿರುವ ಲೀಲಾವತಿ ಅವರು ಗ್ರಾಮದ ರೈತರು ಬೆಳೆದಿದ್ದ ಜೋಳದ ಕಡ್ಡಿಯನ್ನು ಖರೀದಿಸಿ ನೆರೆ ಹಾವಳಿಯಿಂದ ಬಳಲುತ್ತಲಿದ್ದ ರಾಸುಗಳಿಗೆ ಮೇವು ಸಿಗದಿರುವ ಆತಂಕಕಾರಿ ಅಂಶವನ್ನು ಅರ್ಥೈಸಿಕೊಂಡು ಮೇವನ್ನು ಸಾಗಿಸಲು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.