ರಾಜ್ಯದಲ್ಲಿ ಮರಳು ಮಾಫಿಯಾಗೆ ತೆರೆ ಎಳೆಯಲು ಸರ್ಕಾರ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ.  ಅದಕ್ಕಾಗಿಯೇ ಮಲೇಶಿಯಾದಿಂದ ಮರಳನ್ನ ಆಮದು ಮಾಡಿಕೊಂಡು ಜನರಿಗೆ ವಿತರಿಸುತ್ತಾ  ಇದೆ.  ಆದ್ರೆ, ಇನ್ನೂ ಫಿಲ್ಟರ್ ಮರಳು ಮಾಫಿಯಾ ಮಾತ್ರ ನಿಂತಿಲ್ಲ.

ಬೆಳಗಾವಿ (ಜ.10): ರಾಜ್ಯದಲ್ಲಿ ಮರಳು ಮಾಫಿಯಾಗೆ ತೆರೆ ಎಳೆಯಲು ಸರ್ಕಾರ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಅದಕ್ಕಾಗಿಯೇ ಮಲೇಶಿಯಾದಿಂದ ಮರಳನ್ನ ಆಮದು ಮಾಡಿಕೊಂಡು ಜನರಿಗೆ ವಿತರಿಸುತ್ತಾ ಇದೆ. ಆದ್ರೆ, ಇನ್ನೂ ಫಿಲ್ಟರ್ ಮರಳು ಮಾಫಿಯಾ ಮಾತ್ರ ನಿಂತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿ ಹೃದಯ ಭಾಗವಾದ ಗಾಂಧಿನಗರದಲ್ಲಿ ಎಗ್ಗಿಲ್ಲದೆ ಫಿಲ್ಟರ್ ಮರಳು ಮಾಫಿಯಾ ತನ್ನ ಅಷ್ಟಭಾವುಗಳನ್ನು ತೆರದಿದೆ. ಜನರಿಗೆ ಇದು ಮಹಾರಾಷ್ಟ್ರದ ರಾಜಗೋಳಿ ಮರಳು, ಇದು ಗೋಕಾಕ್ ಘಟಪ್ರಭಾ ನದಿ ಮರಳು, ಇದು ರಾಮದುರ್ಗ ಮಲಪ್ರಭಾ ನದಿ ಮರಳು ಎಂದು ಜನರನ್ನು ಮರಳು ಮಾಡಿ ಒಂದು ಲಾರಿಗೆ 17 ರಿಂದ 30 ಸಾವಿರದವರೆಗೆ ಮಾರಾಟ ಮಾಡುತ್ತಾರೆ. ಇಲ್ಲಿ ಮಾಫಿಯಾ ಯಾವ ಮಟ್ಟಿಗೆ ಇದೆ ಅಂದ್ರೆ ಹಗಲಲ್ಲೇ ಇಲ್ಲಿ ಫಿಲ್ಟರ್ ಮಾರಳು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಇಲ್ಲಿ ಸುಮಾರು 300 ಲಾರಿ ಮರಳು ಮಾರಾಟವಾಗುತ್ತಿದ್ದು ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾಗಿರೋ ರಾಜಧನ, ಜಿಎಸ್ಟಿ ಸೇರಿ ಪ್ರತಿನಿತ್ಯ ಸುಮಾರು 10 ಕೋಟಿ ರೂ. ಖೋತಾ ಆಗುತ್ತಿದೆ.

ನಗರದಲ್ಲಿ ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿ ಸುಮಾರು 5 ಠಾಣೆಗಳಿಗೆ ಈ ಫಿಲ್ಟರ್‌ ಮಾಫಿಯಾದ ಕರಾಳ ಬಾಹು ಹಬ್ಬಿದೆ. ಅಲ್ಲದೆ ಇದಕ್ಕೆ ಪೊಲೀಸರೇ ಸಹಕರಿಸುತ್ತಿದ್ದು ಮಹಾರಾಷ್ಟ್ರ ದಿಂದ ಮಣ್ಣು ತಂದು ಅದನ್ನು ನೀರಿನಲ್ಲಿ ತೊಳೆಯುವ ದೃಶ್ಯ ಪೊಲೀಸರ ಕಣ್ಣು ಮುಂದೆ ಎಗ್ಗಿಲ್ಲದೆ ನಡೆಯತ್ತಿರೋದು ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ಸೆರೆಯಾಗಿದೆ.