ಯುಜಿಸಿ ಶ್ರೇಣಿಯ ವೇತನ ಪಡೆಯುತ್ತಿರುವ 8 ಲಕ್ಷ ಉಪನ್ಯಾಸಕರಿಗೆ ಸಂತಸದ ಸುದ್ದಿ. ಉಪನ್ಯಾಸಕರ ವೇತನ ಶೀಘ್ರ ಶೇ. 22 ರಿಂದ 28ರವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ.

ನವದೆಹಲಿ(ಜು.11): ಯುಜಿಸಿ ಶ್ರೇಣಿಯ ವೇತನ ಪಡೆಯುತ್ತಿರುವ 8 ಲಕ್ಷ ಉಪನ್ಯಾಸಕರಿಗೆ ಸಂತಸದ ಸುದ್ದಿ. ಉಪನ್ಯಾಸಕರ ವೇತನ ಶೀಘ್ರ ಶೇ. 22 ರಿಂದ 28ರವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ.

ವೇತನ ಹೆಚ್ಚಳ ಕುರಿತಾದ ಯುಜಿಸಿ(ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ಸಮಿತಿಯು ಮಾಡಿರುವ ಶಿಫಾರಸು ಇದೇ ತಿಂಗಳು ಕೇಂದ್ರ ಸಚಿವ ಸಂಪುಟದ ಮುಂದೆ ಬರುವ ನಿರೀಕ್ಷೆಯಿದ್ದು, ಇದಕ್ಕೆ ಅಂಗೀಕಾರ ದೊರಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಭತ್ಯೆ ಏರಿಕೆ ನಿರ್ಧಾರವನ್ನು ನಂತರದಸ ದಿನಗಳಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಪ್ರಸ್ತಾವನೆ ಅಂಗೀಕಾರವಾದರೆ ಈಗಷ್ಟೇ ನೇಮಕವಾದ ಸಹಾಯಕ ಪ್ರಾಧ್ಯಾಪಕರೊಬ್ಬರ ವೇತನ 10,369 ರು. ನಷ್ಟು ಏರುತ್ತದೆ. ಸಹ ಪ್ರಾಧ್ಯಾಪಕರ ವೇತನ 23,662 ರು. ನಷ್ಟು ಹೆಚ್ಚುತ್ತದೆ.

ರಾಜ್ಯ ಸರ್ಕಾರಿ ಅನುದಾನಿತ ಪದವಿ ಕಾಲೇಜುಗಳು, ಕೇಂದ್ರೀಯ ವಿವಿಗಳು ಹಾಗೂ ಕೇಂದ್ರೀಯ ಅನುದಾನಿತ ಐಐಟಿ, ಎನ್'ಐಟಿಗಳಿಗೆ ಇದರ ಲಾಭ ತಟ್ಟಲಿದೆ. ವೇತನ ಹೆಚ್ಚಳದಿಂದ 3 ವರ್ಷದಲ್ಲಿ ಸರ್ಕಾರಿ ಬೊಕ್ಕಸಕ್ಕೆ 70 ಸಾವಿರ ಕೋಟಿ ರು ಹೊರೆ ಬೀಳುವ ಸಾಧ್ಯತೆ ಇದೆ. ಈ ಹಿಂದೆ ಕಡೆಯ ಬಾರಿ ಯುಜಿಸಿ ವೇತನ ಪರಿಷ್ಕರಣೆಯಾಗಿದ್ದು 2006ರಲ್ಲಿ