ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಸರಿ ಸುಮಾರು ನಾಲ್ಕೂವರೆ ವರ್ಷಗಳನ್ನು ಪೂರೈಸಿದೆ. ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿ ವಿಶ್ವದ ಅಗ್ರ ನಾಯಕರ ಸಾಲಿನಲ್ಲಿ ನಿಂತಿದ್ದಾರೆ.  ಹೀಗಿರುವಾಗ ಪ್ರಧಾನಿ ಮೋದಿ ತಿಂಗಳಿಗೆ ಎಷ್ಟು ಸಂಬಳ ಪಡೆಯುತ್ತಾರೆ ಎಂಬುವುದು ಸಹಜವಾಗಿಯೇ ಕುತೂಹಲ ಮೂಡಿಸುವ ಪ್ರಶ್ನೆ. ಕೊನೆಗೂ ಈ ಪ್ರಶ್ನೆಗೆ ಉತ್ತರ ಲಭಿಸಿದ್ದು, ಪ್ರಧಾನಿ ಮೋದಿಯ ವೇತನ ಎಷ್ಟು ಎಂಬುವುದು ಬಹಿರಂಗವಾಗಿದೆ.

'ಪತ್ರಿಕಾ' ಎಂಬ ಸುದ್ದಿ ಜಾಲತಾಣದಲ್ಲಿ ಲಭ್ಯವಾದ ಮಾಹಿತಿ ಅನ್ವಯ ಪ್ರಧಾನಿ ಮೋದಿ ಮಾಸಿಕ ವೇತನ 1 ಲಕ್ಷದ 65 ಸಾವಿರ ಎಂದು ಹೇಳಲಾಗಿದೆ. ಇದನ್ನು ಹೊರತುಪಡಿಸಿ ಇತರ ಸೌಲಭ್ಯಗಳನ್ನೂ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಈ ಮೊದಲಿನಿಂದಲೂ ಪ್ರಧಾನ ಮಂತ್ರಿಯ ವೇತನ ಓರ್ವ ಕ್ಯಾಬಿನೆಟ್ ಸಚಿವರಿಗಿಂತಲೂ ಕಡಿಮೆ ಎಂಬುವುದು ಅಚ್ಚರಿ ಮುಡಿಸುವಂತಹ ವಿಚಾರ. ಕ್ಯಾಬಿನೆಟ್ ಸಚಿವರ ಪ್ರತಿ ತಿಂಗಳ ವೇತನ 2.50 ಲಕ್ಷ.  

ವಾರ್ಷಿಕ ವೇತನ 19 ಲಕ್ಷದ 80 ಸಾವಿರ ಹೊರತುಪಡಿಸಿ, ಪ್ರಧಾನಿ ಮೋದಿ ಓಡಾಡುವ ಬಿಎಂ ಡಬ್ಲ್ಯೂ ಕಾರು ಹಾಗೂ ವಿದೇಶೀ ಪ್ರವಾಸದ ಖರ್ಚು ಹಾಗೂ ದೆಹಲಿಯ ಹೃದಯ ಭಾಗದಲ್ಲಿರುವ ರೇಸ್ ಕೋರ್ಟ್ ರಸ್ತೆಯಲ್ಲಿರುವ ನಂಬರ್ 7[ಭಾರತದ ಪ್ರಧಾನ ಮಂತ್ರಿ ನಿವಾಸ] ಖರ್ಚು ಹಾಗೂ ಊಟಕ್ಕೆ ತಗಲುವ ವೆಚ್ಚವನ್ನು ಭತ್ಯೆಯ ರೂಪದಲ್ಲಿ ಸರ್ಕಾರವೇ ಭರಿಸುತ್ತದೆ.