ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಡಿಸೆಂಬರ್ ವೇಳೆಗೆ ಬ್ಯಾಡ್ಮಿಂಟನ್ ಕೋರ್ಟ್‌ಗಿಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಮಂಡಿಮಂಡಿನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶೀಘ್ರದಲ್ಲಿ ಗುಣಮುಖರಾಗಿ ಮತ್ತೆ ಅಂಗಣಕ್ಕೆ ಬರುವುದಾಗಿ ಸೈನಾ ಹೇಳಿದ್ದಾರೆ. ಮುಂದಿನ 2 ರಿಂದ 3 ವರ್ಷಗಳ ಕಾಲ ಪ್ರಭಾವಿ ಪ್ರದರ್ಶನ ತೋರುವ ಆತ್ಮವಿಶ್ವಾಸವಿದೆ. ಈ ಹಿಂದಿನ 5 ರಿಂದ 6 ವರ್ಷಗಳಲ್ಲಿ ಉತ್ತಮ ಆಟವಾಡಿದ್ದೆ ಎನ್ನುವ ತೃಪ್ತಿಯಿದೆ ಎಂದಿದ್ದಾರೆ ಸೈನಾ.
ದುಬೈ ವಿಶ್ವ ಸೂಪರ್ ಸೀರಿಸ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ವಿಶ್ವಾಸವಿದೆ ಎಂತಲೂ ಹೇಳಿರುವ ಸೈನಾ, ಸಂಪೂರ್ಣ ಫಿಟ್ ಆದ ನಂತರವೇ ಕಣಕ್ಕಿಳಿಯುವುದಾಗಿ ಸೈನಾ ಹೇಳಿದ್ದಾರೆ.
