ಆದರೆ ಭೇಟಿ ಬಳಿಕ ಮಾತನಾಡಿದ ಕಮಲ್  40 ವರ್ಷಗಳಿಂದ ಚಿತ್ರರಂಗದಲ್ಲಿ ನನ್ನ ಬಣ್ಣ ಯಾವುದೆಂದು  ನೋಡಿದ್ದೀರಾ, ಕೇಸರಿ ನನ್ನ ಬಣ್ಣವಲ್ಲ  ಎಂದು ಗೊಂದಲ ಮೂಡಿಸಿದ್ದಾರೆ. 

ಖ್ಯಾತ ನಟ ಕಮಲ್ ಹಾಸನ್ ರಾಜಕೀಯ ಎಂಟ್ರಿ ಸುದ್ದಿ ಹಸಿಯಾಗಿರುವಾಗಲೇ, ಇಂದು ಕಮಲ್ ಹಾಸನ್ ಕೇರಳ ಮುಖ್ಯಮಂತ್ರಿಯನ್ನ ಭೇಟಿ ಮಾಡಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ ಕಮಲ್ ಹಾಸನ್ ರಾಜಕೀಯ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಕಮಲ್​ ಹಾಸನ್ ರಾಜಕೀಯ ರಂಗ ಪ್ರವೇಶ ಮಾಡುವ ಸೂಚನೆ ನೀಡಿದ್ದಾರೆ.

ಆದರೆ ಭೇಟಿ ಬಳಿಕ ಮಾತನಾಡಿದ ಕಮಲ್ 40 ವರ್ಷಗಳಿಂದ ಚಿತ್ರರಂಗದಲ್ಲಿ ನನ್ನ ಬಣ್ಣ ಯಾವುದೆಂದು ನೋಡಿದ್ದೀರಾ, ಕೇಸರಿ ನನ್ನ ಬಣ್ಣವಲ್ಲ ಎಂದು ಗೊಂದಲ ಮೂಡಿಸಿದ್ದಾರೆ. ಪಿಣರಾಯಿ ಸರ್ಕಾರಕ್ಕೆ 2 ವರ್ಷ ತುಂಬಿದ ಹಿನ್ನೆಲೆ ಹಾಗೂ ಓಣಂ ಹಬ್ಬದ ಶುಭಾಶಯ ತಿಳಿಸಲು ಭೇಟಿ ಮಾಡಿದ್ದು. ಅಲ್ದೇ ಪಿಣರಾಯಿ ವಿಜಯನ್ ಜೊತೆ ಮಾತುಕತೆ ಸಾಮಾನ್ಯವಲ್ಲ. ಬದಲಾಗಿ ಒಂದು ಉತ್ತಮ ಅನುಭವವಾಗಿದೆ ಎಂದು ತಲೆಯಲ್ಲಿ ಹುಳ ಬಿಟ್ಟಿದ್ದಾರೆ.