2000ಕ್ಕೂ ಅಧಿಕ ಮಂದಿಗೆ ಟೋಪಿ ಹಾಕಿದ್ದ, ಮಹಾನ್ ವಂಚಕ ಸಚಿನ್ ನಾಯಕ್ ಹಾಗೂ ಆತನ ಇಬ್ಬರು ಪತ್ನಿಯರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯಾದ್ಯಂತ ತೀವ್ರ ಚರ್ಚೆಗೀಡಾಗಿದ್ದ ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲು ಸಿಎಂ ಆದೇಶ ನೀಡಿದ್ದಾರೆ. ಈ ವಂಚನೆ ಪುರಾಣವನ್ನು ಬಿಚ್ಚಿಟ್ಟಿದ್ದ ಸುವರ್ಣ ನ್ಯೂಸ್ ಈ ಕುರಿತಾಗಿ ನಿರಂತರ ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಈ ವರದಿಗೆ ಪ್ರತಿಕ್ರಿಯಿಸಿರುವ ಸಿಎಂ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದಾಗಿ ತಿಳಿಸಿದ್ದಾರೆ. ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್
ಬೆಂಗಳೂರು(ಮಾ.14): 2000ಕ್ಕೂ ಅಧಿಕ ಮಂದಿಗೆ ಟೋಪಿ ಹಾಕಿದ್ದ, ಮಹಾನ್ ವಂಚಕ ಸಚಿನ್ ನಾಯಕ್ ಹಾಗೂ ಆತನ ಇಬ್ಬರು ಪತ್ನಿಯರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯಾದ್ಯಂತ ತೀವ್ರ ಚರ್ಚೆಗೀಡಾಗಿದ್ದ ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲು ಸಿಎಂ ಆದೇಶ ನೀಡಿದ್ದಾರೆ. ಈ ವಂಚನೆ ಪುರಾಣವನ್ನು ಬಿಚ್ಚಿಟ್ಟಿದ್ದ ಸುವರ್ಣ ನ್ಯೂಸ್ ಈ ಕುರಿತಾಗಿ ನಿರಂತರ ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಈ ವರದಿಗೆ ಪ್ರತಿಕ್ರಿಯಿಸಿರುವ ಸಿಎಂ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದಾಗಿ ತಿಳಿಸಿದ್ದಾರೆ. ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್
ಸಚಿನ್ ನಾಯಕ್'ನಬ ವಂಚನೆ ಅಕ್ರಮವನ್ನು ಎಳೆ ಎಳೆಯಾಗಿ ಸುವರ್ಣ ನ್ಯೂಸ್ ಬಿಚ್ಚಿಟ್ಟಿತ್ತು. ಇಷ್ಟಾದರೂ ಪೊಲೀಸರು ಈತನನ್ನು ಬಂಧಿಸಲು ಹಿಂದೆ ಮುಂದೆ ಯೋಚಿಸಿದ್ದರು. 2000ಕ್ಕೂ ಹೆಚ್ಚು ಮಂದಿಗೆ ಟೋಪಿ ಹಾಕಿದ್ದ ಸಚಿನ್ ನಾಯಕ್ 1000ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದ. ಹಣ ಕೇಳಲು ಹೋದವರ ವಿರುದ್ಧ ಗೂಂಡಾಗಿರಿಯನ್ನೂ ಮಾಡಿದ್ದ. ಇದೀಗ ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿರುವ ಸಿಎಂ ಸಿದ್ಧರಾಮಯ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ ಹಾಗೂ ಇದನ್ನು ತಮ್ಮ ಅಧಿಕೃತ ಟ್ವಿಟರ್ ಅಕೌಂಟ್'ನಲ್ಲಿ ಬರೆದುಕೊಂಡು ಖಚಿತಪಡಿಸಿದ್ದಾರೆ. ಮೋಸ ಹೋದವರ ಬೆಂಬಲಕ್ಕೆ ನಿಂತ ಸುವರ್ಣ ನ್ಯೂಸ್'ಗೆ ಸಿಕ್ಕಂತಹ ಜಯ ಇದು.
ಈ ಪ್ರಕರಣವನ್ನು ಮಡಿವಾಳ ಪೊಲೀಸರು ತನಿಖೆ ಮಾಡುತ್ತಿದ್ದರು. ಆದರೆ ಇವರ ತನಿಖೆ ಕುರಿತಾಗಿ ಎಲ್ಲರಲ್ಲೂ ಅನುಮಾನವಿತ್ತು ಆದರೀಗ ಈ ಪ್ರಕರಣ ಸಿಐಡಿ ಪಾಲಾಗಿದೆ. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸಚಿನ್ ನಾಯಕ್, ಈತನ ಇಬ್ಬರು ಪತ್ನಿಯರು ದಿಶಾ ಚೌಧರಿ ಮತ್ತು ಮಂದೀಪ್ ಕೌರ್ ಹಾಗೂ ಆತನ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
