ಫ್ಲಿಪ್‌ಕಾರ್ಟ್ ಸಂಸ್ಥಾಪಕ ಬನ್ಸಲ್‌ರಿಂದ ಬೆಂಗಳೂರಲ್ಲಿ ಹೊಸ ಸ್ಟಾರ್ಟಪ್ ಕಂಪನಿ | ಬಿಎಸಿ ಅಕ್ವಾಸಿಷೆನ್ಸ್ ಪ್ರೈ.ಲಿ ಎಂಬ ಹೊಸ ಕಂಪನಿಯನ್ನು ಸಚಿನ್ ಬೆಂಗಳೂರಿನ ಕೋರಮಂಗಲ ಬಳಿ ಸ್ಥಾಪಿಸಿದ್ದಾರೆ.
ನವದೆಹಲಿ (ಡಿ. 26): ಇತ್ತೀಚೆಗಷ್ಟೇ ಅಮೆರಿಕದ ಮೂಲದ ವಾಲ್‌ಮಾರ್ಟ್ ಸಂಸ್ಥೆಗೆ ಮಾರಾಟಗೊಂಡ, ಫ್ಲಿಪ್‌ಕಾರ್ಟ್‌ನ ಸಂಸ್ಥಾಪಕ ಪೈಕಿ ಒಬ್ಬರಾದ ಸಚಿನ್ ಬನ್ಸಲ್, ಮತ್ತೆ ಬೆಂಗಳೂರಿನಲ್ಲೇ ತಮ್ಮ ಹೊಸ ಕಂಪನಿ ಸ್ಥಾಪಿಸಿದ್ದಾರೆ.
ಬಿಎಸಿ ಅಕ್ವಾಸಿಷೆನ್ಸ್ ಪ್ರೈ.ಲಿ ಎಂಬ ಹೊಸ ಕಂಪನಿಯನ್ನು ಸಚಿನ್ ಬೆಂಗಳೂರಿನ ಕೋರಮಂಗಲ ಬಳಿ ಸ್ಥಾಪಿಸಿದ್ದಾರೆ. ಹೊಸ ಕಂಪನಿಯು ಅಂತರ್ಜಾಲ ಮತ್ತು ಮೊಬೈಲ್ ಆಧರಿತ ತಾಂತ್ರಿಕ ಮತ್ತು ತಂತ್ರಜ್ಞಾನ ಸೇವೆ ನೀಡುವ ವಲಯಗಳಲ್ಲಿ ಹೊಸ ಸ್ಟಾರ್ಟ್‌ಪ್ ಹುಟ್ಟುಹಾಕುವ ಮತ್ತು ಖರೀದಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿದೆ.
ಸಚಿನ್ ಬನ್ಸಲ್, ಫ್ಲಿಪ್‌ಕಾರ್ಟ್‌ನಲ್ಲಿ ತಾವು ಹೊಂದಿದ್ದ ಶೇ.5ರಷ್ಟುಪಾಲನ್ನು 7000 ಕೋಟಿ ರು. ಮಾರಾಟ ಮಾಡಿದ್ದರು. ಈ ಪೈಕಿ ಒಂದಷ್ಟುಹಣವನ್ನು ಅವರು ಈಗಾಗಲೇ ವಿವಿಧ ಸ್ಟಾರ್ಟಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.
