ಕೇರಳದಲ್ಲಿರುವ ಮಾರ್ಕ್ಸಿಸ್ಟ್ ನಡೆದುಕೊಳ್ಳುವ ರೀತಿಯ ಬಗ್ಗೆ ಮಾತನಾಡಿರುವ ಸಂಸದ ರಾಜೀವ್ ಚಂದ್ರಶೇಖರ್ ಶಬರಿಮಲೆ ವಿಚಾರದಲ್ಲಿ ಪಿಣರಾಯಿ ವಿಜಯನ್ ತೆಗೆದುಕೊಂಡ ತೀರ್ಮಾನಗಳು ದಕ್ಷಿಣ ಭಾರತದಲ್ಲಿ ಮಾರ್ಕ್ಸಿಸ್ಟ್ ಸಿದ್ಧಾಂತಗಳಿಗೆ ಅಂತ್ಯ ಹಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.  ಸೋದರ ಸಂಸ್ಥೆ ಮೈ ನೇಶನ್‌ಗೆ ನೀಡಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಶಬರಿಮಲೆ ವಿವಾದದ ಬಗ್ಗೆ ಏನು ಹೇಳುತ್ತೀರಿ?
ನಾನು ಕೆಲ ತಿಂಗಳ ಹಿಂದೆಯೇ ಈ ಬಗ್ಗೆ ಹೇಳಿದ್ದೆ.. ಇದು ಹಿಂದು ಮತ್ತು ಸಂಪ್ರದಾಯದ ನಡುವಿನ ಹೋರಾಟವೂ ಅಲ್ಲ.. ಮಹಿಳೆಯರು ಮತ್ತು ಧರ್ಮದ ನಡುವಿನ ಹೋರಾಟವೂ ಅಲ್ಲ. ಇದು ಪಕ್ಕಾ ಕಮ್ಯೂನಿಸ್ಟರ ರಾಜಕೀಯ ಲಾಭದ ತಂತ್ರ. ಕೇರಳದ ಹಿಂದು ಸಮುದಾಯವನ್ನು ಒಡೆಯುವ, ನಂಬಿಕೊಂಡು ಬಂದ ಹಳೆಯ ಸಂಪ್ರದಾಯ ಮುರಿಯುವ. ಲಕ್ಷಾಂತರ ಜನರಿಗೆ ನಂಬಿಕೆಗೆ ಭಂಗ ತರುವ ವಿಚಾರವೇ ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ. 

ಶಬರಿಗೆಮಲೆಗೆ ಮೂರಲ್ಲ 10 ಮಹಿಳೆಯರ ಪ್ರವೇಶ!

ಕೇರಳ ಸರಕಾರ ಹಿಂದು ನಂಬಿಕೆಗಳಿಗೆ ಮಾತ್ರ ಭಂಗ ತರುತ್ತಿದೆಯೇ?
ಇದು ನಿಜ. ಇದು ಭಾರತದಲ್ಲಿ ತಳವೂರಿರುವ ನಂಬಿಕೆಯ ಪ್ರಶ್ನೆ. ಮಾರ್ಕಿಸ್ಟ್ ತಂತ್ರಗಳು ಹಿಂದು ಮತ್ತು ಅಯ್ಯಪ್ಪ ಭಕ್ತರ ನಂಬಿಕೆಗೆ ಭಂಗ ತರುತ್ತಿವೆ. ಈ ಎಡಪಂಥೀಯರು ಅವರ ಬಾವುಟವನ್ನೇ, ಅವರ ನಂಬಿಕೆಯನ್ನೇ ತಿರಸ್ಕರಿಸುತ್ತಾರೆ. ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಿಚಾರದಲ್ಲಿ ಕೇರಳ ಸರ್ಕಾರ ಮೂಗು ತೂರಿಸಲ್ಲ. ಯಾಕೆಂದರೆ ಅವರ ಹಿಂದೆ ದೊಡ್ಡ ಓಟ್ ಬ್ಯಾಂಕ್ ಇದೆ.

ಈ ವಿಚಾರ ಹಿಂದುಗಳ ಒಗ್ಗಟ್ಟಿಗೆ ಕಾರಣವಾಗಬಹುದಾ?
ಮೊದಲನೆ ದಿನದಿಂದಲೂ ಹೇಳುತ್ತಿದ್ದೇನೆ. ಈ ವಿಚಾರ ರಾಜಕಾರಣಕ್ಕಾಗಿ ಬಳಕೆ ಆಗಬಾರದು. ನನಗೆ ಸ್ಪಷ್ಟ ನಂಬಿಕೆಇದೆ. ಜನರಲ್ಲಿ ಇಂಥ ಬೆಳವಣಿಗೆಗಳ ಮೇಲೆ ಒಂದು ಸಿಟ್ಟು ಇದ್ದೆ ಇದೆ. ಕರ್ನಾಟಕ, ಕೇರಳ, ತಮಿಳುನಾಡು  ಮತ್ತು ಆಂಧ್ರ ಪ್ರದೇಶದ ಅಯ್ಯಪ್ಪ ಭಕ್ತರಲ್ಲಿ ಸಿಟ್ಟು ಹುದುಗಿಕೊಳಿತಿದೆ. ನನ್ನ ಪ್ರಕಾರ ದಕ್ಷಿಣ ಭಾರತದಲ್ಲಿ ಪಿಣರಾಯಿ ವಿಜಯನ್ ತೆಗೆದುಕೊಂಡಿರುವ ಈ ತೀರ್ಮಾನ ಮಾರ್ಕಿಸ್ಟ್‌ಗೆ ಕೊನೆ ಅಧ್ಯಾಯ ಹಾಡಲಿದೆ.

ಶಬರಿಮಲೆ ಪ್ರವೇಶ ಮಾಡಿದ ಲಂಕಾ ಮಹಿಳೆ

ಪಿಣರಾಯಿ ವಿಜಯನ್‌ಗೆ ಈ ಸೂಕ್ಷ ವಿಚಾರಗಳು ಅರ್ಥ ಆಗಲಿಲ್ವೆ? 
ಇಲ್ಲ..ಈ ಬಗ್ಗೆ ಏನು ಹೇಳಲಿ.. ಪಿಣರಾಯಿ ವಿಜಯನ್ ಪಕ್ಕಾ ಮಾರ್ಕಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಅವರು ಏನು ಮಾಡುತ್ತಿದ್ದಾರೆ ಎನ್ನುವುದಕ್ಕಿಂತ ಇದು ಅಯ್ಯಪ್ಪ ಸ್ವಾಮಿ ಭಕ್ತರು ಮತ್ತು ಮಾರ್ಕ್ಸಿಸ್ಟ್ ನಡುವಿನ ಹೋರಾಟವಾಗಿದೆ.

ಕೇರಳ ಸರಕಾರದ ನಡೆ ಬಗ್ಗೆ ಏನು ಹೇಳುತ್ತೀರಿ?
ನಿಜಕ್ಕೂ ಒಮ್ಮೊಮ್ಮೆ ಬೇಸರ ಎನಿಸುತ್ತದೆ. ಹಣಕ್ಕಾಗಿ ಈ ಸರಕಾರ ಮಧ್ಯ ಪ್ರಾಚ್ಯಕ್ಕೆ ತೆರಳಿ ಭಿಕ್ಷೆ ಬೇಡುತ್ತಿದೆ. ವಿಜಯನ್ ಅಧಿಕಾರಕ್ಕೆ ಬಂದ ಮೇಲೆ ಆಡಳಿತವೇ ಇಲ್ಲದಂತಾಗಿದೆ. ನಟ ನಟಿಯರ ಕಿಡ್ನಾಪ್ ಆಗುತ್ತಿದೆ. ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಆಗುತ್ತದೆ ಅಂದರೆ ಸರಕಾರ ಯಾವ ಹಂತಕ್ಕೆ ಬಂದು ನಿಂತಿದೆ ಎಂಬ ಅರಿವಾಗುತ್ತದೆ.