ನಾಸ್ತಿಕ ಸರ್ಕಾರವಿದ್ದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿ
ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕೋಲಾರ[ಅ.21] ಶಬರಿಮಲೆ ತೀರ್ಮಾನವನ್ನು ನಾವು ಒಪ್ಪಲ್ಲ. ಕೋಟ್೯ಗಳು ಧಾರ್ಮಿಕ ಕಾರ್ಯಗಳ ನಡುವೆ ಮೂಗು ತೂರಿಸೋದು ಸರಿಯಲ್ಲ. ಕೋರ್ಟ್ ಧರ್ಮಶಾಸ್ತ್ರದ ಪ್ರಕಾರ ಆಚಾರಗಳು ನಡೆಯ ಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುತಾಲಿಕ್, ವೈಜ್ಞಾನಿಕವಾಗಿ ಆ ಆಚರಣೆ ಮೂಡಿ ಬಂದಿದೆ. ಆ ಬಗ್ಗೆ ಸಮಾನತೆ ಹೆಸರಿನಲ್ಲಿ ಕಾನೂನು ಜಾರಿಗೊಳಿಸಿದು ಸರಿಯಲ್ಲ. ಕೇರಳದಲ್ಲಿ ಕೆಲ ದೇವಸ್ಥಾನ ಪುರುಷರಿಗೆ ಪ್ರವೇಶವಿಲ್ಲ. ಕೇರಳ ಸರ್ಕಾರ ನಾಸ್ತಿಕ ಸರ್ಕಾರ ಎಂದು ದೂರಿದರು.
ಭಕ್ತರ ಮೇಲೆ ಲಾಠಿ ಚಾಚ್೯ ಸರಿಯೇ ಎಂಬುದನ್ನು ಪ್ರಶ್ನೆ ಮಾಡಬೇಕಾಗುತ್ತದೆ. ಕೇರಳದಲ್ಲಿ ರಾಷ್ಟ್ರಪತಿ ಆಡಳಿತ ತನ್ನಿ. ಪ್ರವೇಶ ಮಾಡಲು ಮುಂದಾದ ಮಹಿಳೆಯರ ಚಾರಿತ್ರ್ಯ ಮೊದಲು ತಿಳಿಯಬೇಕಿದೆ. ಅದು ಪೊಲೀಸರ ಡ್ರಸ್ ಹಾಕಿ ಕೊಂಡಿದ್ದು ನಾಚಿಕೆ ಗೇಡಿನ ಸಂಗತಿ ಎಂದರು.
ಇಂಥ ಘಟನೆಗಳನ್ನು ವಿರೋಧಿಸಿ ಇದೇ ತಿಂಗಳ 28ರಂದು ಐದು ಸಾವಿರಕ್ಕೂ ಹೆಚ್ಚು ಮಂದಿಯಿಂದ ದತ್ತ ಮಾಲೆ ಪೀಠದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದೇವೆ ಎಂದು ಮುತಾಲಿಕ್ ತಿಳಿಸಿದರು.