ಮುಂಬೈ(ಮಾ. 01)  ಶಿವಸೇನೆ ತನ್ನಮುಖವಾಣಿ ಸಾಮ್ನಾದಲ್ಲಿ ಈ ಸಾರಿ ಬುರ್ಖಾ ನಿಷೇಧದ ವಿಚಾರವನ್ನು ಬರೆದುಕೊಂಡಿದೆ.  'ರಾವಣನ ರಾಜ್ಯ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ ಮಾಡಲು ಸಾಧ್ಯವಿದ್ದರೆ ರಾಮ ರಾಜ್ಯದ ಅಯೋಧ್ಯೆಯಲ್ಲಿ ಯಾವಾಗ?  ಎಂದು ಪ್ರಶ್ನೆ ಮಾಡಿದೆ. ಶ್ರೀಲಂಕಾದಲ್ಲಿ ತೆಗೆದುಕೊಂಡ ಕ್ರಮವನ್ನು ಪ್ರಧಾನಿ ಮೋದಿ ಅನುಸರಿಸಬೇಕು ಎಂದು ಶಿವಸೇನೆ ಹೇಳಿದೆ.

ಸರಣಿ ಬಾಂಬ್ ಬ್ಲಾಸ್ಟ್ ಗಳ ನಂತರ ಶ್ರೀಲಂಕಾದಲ್ಲಿ ಬುರ್ಖಾ ಸೇರಿದಂತೆ ಮುಖವನ್ನು ಕವರ್ ಮಾಡಿಕೊಳ್ಳುವಂತಹ ವೇಷಭೂಷಣವನ್ನು ನಿಷೇಧ ಮಾಡಲಾಗಿದೆ. 

ಲಂಕಾ ದಾಳಿ ಹಿಂದಿನ ಕಾರಣ ಬಹಿರಂಗ

ಈ ಮೊದಲು ಬಿಜೆಪಿಯೊಂದಿಗೆ ಸ್ನೇಹ ಕಳೆದುಕೊಂಡಿದ್ದ ಶಿವಸೇನೆ ನಂತರ ಲೋಕಸಮರದ ವೇಳೆ ಮೈತ್ರಿ ಮಾಡಿಕೊಂಡಿತು. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾದದಲ್ಲಿ ಬುರ್ಖಾ ನಿಷೇಧ ಮಾಡಲು ಸಾಧ್ಯವಿದೆ.  ಭಾರತದಲ್ಲಿಯೂ ಆಗಬೇಕು ಆಗ ಮಾತ್ರ ದೇಶದ ಭದ್ರತೆಗೆ ಇನ್ನು ಹೆಚ್ಚಿನ ಒತ್ತು ನೀಡಲು ಸಾಧ್ಯವಿದೆ ಎಂದು ಹೇಳಿದೆ.