ಕೊಲಂಬೋ: ಸಿರಿಯಾದಲ್ಲಿ ತಮ್ಮ ಸಂಘಟನೆಯನ್ನು ನಿರ್ಮೂಲನೆ ಮಾಡಿದಕ್ಕೆ ಪ್ರತಿಯಾಗಿ ಲಂಕಾದಲ್ಲಿ ಸರಣಿ ದಾಳಿ ನಡೆಸಲಾಯ್ತು ಎಂದು ಐಸಿಎಸ್‌ ಮುಖ್ಯಸ್ಥ ಅಬೂಬಕರ್‌ ಬಗ್ದಾದಿ ಹೇಳಿಕೊಂಡಿದ್ದಾನೆ. ಇದು, ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್ ಮಸೀದಿ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಲಂಕಾದ ಮೇಲೆ ದಾಳಿ ನಡೆಸಲಾಗಿತ್ತು ಎಂಬ ಉಗ್ರರ ಇತ್ತೀಚಿನ ಹೇಳಿಕೆಗೆ ಪೂರ್ಣ ಉಲ್ಟಾಆಗಿದೆ.

ಈ ಹಿಂದೆ ಹಲವು ಬಾರಿ ಸಾವನ್ನಪ್ಪಿದ್ದಾನೆ ಎಂದು ಹೇಳಲ್ಪಟ್ಟಿದ್ದ ಬಗ್ದಾದಿ, ಇದೀಗ ದಿಢೀರನೆ ಹೊಸ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಲಂಕಾ ದಾಳಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. 

ಈ ವಿಡಿಯೋವನ್ನು ಅಮೆರಿಕ ಮೂಲದ ‘ಸೈಟ್‌’(ಎಸ್‌ಐಟಿಇ) ಎಂಬ ಗುಪ್ತಚರ ಸಂಸ್ಥೆ ಖಚಿತಪಡಿಸಿದೆ. ವಿಡಿಯೋದಲ್ಲಿ ಲಂಕಾ ದಾಳಿ ಬಗ್ಗೆ ಬಗ್ದಾದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. 18 ನಿಮಿಷಗಳ ಈ ವಿಡಿಯೋ ಲಂಕಾ ದಾಳಿಗೆ ಮುನ್ನವೇ ದಾಖಲಿಸಿದ್ದು ಎಂಬುದು ಖಚಿತಪಟ್ಟಿದೆ. 2014ರಲ್ಲಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡ ಬಳಿಕ ಮತ್ತೆ ಬಗ್ದಾದಿ ಸುಮಾರು 5 ವರ್ಷಗಳ ಬಳಿಕ ವಿಡಿಯೋದಲ್ಲಿ ಪ್ರತ್ಯಕ್ಷನಾಗಿದ್ದಾನೆ.