ಬೀಳಗಿ: ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯ ಬರ ಅಧ್ಯಯನ ತಂಡವು ಮಂಗಳವಾರ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಜೆಪಿ ಕಚೇರಿಯಲ್ಲಿ ಉಪಾಹಾರ ಸೇವಿಸಿದೆ. 

ಅಲ್ಲದೇ ಸ್ಥಳೀಯ ಶಾಸಕ ಮುರುಗೇಶ ನಿರಾಣಿ ಅವರಿಂದ ಸನ್ಮಾನ ಸ್ವೀಕರಿಸಿ ಮಧ್ಯಾಹ್ನದ ಭೋಜನವನ್ನು ನಿರಾಣಿ ಮನೆಯಲ್ಲಿ ಮಾಡಿದೆ. 

ಲೋಕ ಚುನಾವಣಾ ಬೆನ್ನಲ್ಲೇ ಬಿಜೆಪಿ ಮೈತ್ರಿಗೆ ಮತ್ತೊಂದು ಪಕ್ಷ ಕೋಕ್?

ಇದು ಸ್ಥಳೀಯ ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ದೇಶಪಾಂಡೆ ನೇತೃತ್ವದಲ್ಲಿ ಬಂದಿದ್ದ ಸಿ.ಎಸ್.ಶಿವಳ್ಳಿ, ಮನಗೂಳಿ, ಶಿವಾನಂದ ಪಾಟೀಲ್ ಬಿಜೆಪಿ ಕಾರ್ಯಾಲಯದಲ್ಲಿ ಉಪಾಹಾರ ಸೇವಿಸಿದರು.

ಈ ನಡೆ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ ಕಿಡಿಕಾರಿದ್ದಾರೆ.