Asianet Suvarna News Asianet Suvarna News

ಈ ರೋಗಕ್ಕೆ ಮೊದಲ ಬಾರಿಗೆ ನೂತನ ಔಷಧ ಬಿಡುಗಡೆ

ಈ ರೋಗಕ್ಕೆ ಭಾರತದಲ್ಲೇ ಪ್ರಥಮ ಬಾರಿಗೆ ನೂತನ ಔಷಧವೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಶಿಘ್ರದಲ್ಲೇ ಮಾರುಕಟ್ಟೆಗ ಔಷಧವನ್ನು ಪರಿಚಯಿಸಲಿದೆ. 

Rusan Pharma Launches ParkinSon Disease Drug
Author
Bengaluru, First Published Dec 17, 2018, 8:41 AM IST

ಬೆಂಗಳೂರು :  ಪಾರ್ಕಿನ್‌ಸನ್‌ ರೋಗದ ಚಿಕಿತ್ಸೆಗಾಗಿ ನೂತನ ಔಷಧ ‘ಎಪೊಸಾನ್‌ ಅಪೋಮಾರ್ಫಿನ್‌’ಅನ್ನು ಭಾರತದಲ್ಲೇ ಪ್ರಥಮ ಬಾರಿಗೆ ರುಸಾನ್‌ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಪ್ರಾಥಮಿಕ ಹಂತದಲ್ಲಿ ಮುಂಬೈ, ದೆಹಲಿ, ಬೆಂಗಳೂರು ಹಾಗೂ ಚೆನ್ನೈನ ಪ್ರಮುಖ ಕೇಂದ್ರಗಳಲ್ಲಿ 2019ರ ಜನವರಿಯಿಂದ ಈ ಔಷಧಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಾಗಲಿದೆ. ಇಂಜೆಕ್ಟೆಡ್‌ ಬೆಲ್ಟ್‌ಅನ್ನು ಮುಂಬರುವ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ನಂತರ 6ರಿಂದ 8 ತಿಂಗಳೊಳಗೆ ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ಔಷಧಿ ದೊರೆಯಲಿದೆ.

ಮಿದುಳಿನ ನರಜೀವಕೋಶಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಔಷಧಿ ಸಹಕಾರಿಯಾಗಿದೆ. ಈ ಹಿಂದೆ ಔಷಧಿ ಪರಿಣಾಮ ಬೀರಲು 30 ನಿಮಿಷಗಳಿಂದ 1ಗಂಟೆಗಳ ಕಾಲಾವಕಾಶ ಅಗತ್ಯವಿತ್ತು. ಇದೀಗ ರೋಗಿಯಲ್ಲಿ ಸಮಸ್ಯೆ ಕಾಣಿಸಿಕೊಂಡ 4ರಿಂದ 10 ನಿಮಿಷಗಳಲ್ಲಿ ಸುಧಾರಿಸಲಿದೆ. ಈ ಔಷಧಿ ಗುಣ ಒಂದೂವರೆ ಗಂಟೆಗಳ ಕಾಲ ಇರಲಿದೆ ಎಂದು ರುಸನ್‌ ಫಾರ್ಮಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಕುನಾಲ್‌ ಸಕ್ಸೇನಾ ತಿಳಿಸಿದ್ದಾರೆ. ಜನವರಿಯಿಂದ ಮಾರುಕಟ್ಟೆಯಲ್ಲಿ ಔಷಧಿ ಲಭ್ಯವಾಗಲಿದ್ದು, ಆಸಕ್ತರು ಮಾಹಿತಿಗಾಗಿ ಟೋಲ್‌ ಫ್ರೀ ಸಂಖ್ಯೆ 1800 266 0515, 1800 103 0475 ಕರೆ ಮಾಡಬಹುದು ಎಂದು ತಿಳಿಸಿದರು.

Follow Us:
Download App:
  • android
  • ios