ಕಳೆದ ಕೆಲ ದಿನಗಳಿಂದ ಕುಸಿತದ ಹಾದಿಯ ಲ್ಲಿರುವ ರುಪಾಯಿ ಮೌಲ್ಯ ಸೋಮವಾರ ಡಾಲರ್ ಎದುರು 67.13 ರು.ಗೆ ತಲುಪಿದೆ. ಇದು ಕಳೆದ 15 ತಿಂಗಳಲ್ಲೇ ರೂಪಾಯಿಯ ಕನಿಷ್ಠ ಮೌಲ್ಯವಾಗಿದೆ.

ಮುಂಬೈ: ಕಳೆದ ಕೆಲ ದಿನಗಳಿಂದ ಕುಸಿತದ ಹಾದಿಯ ಲ್ಲಿರುವ ರುಪಾಯಿ ಮೌಲ್ಯ ಸೋಮವಾರ ಡಾಲರ್ ಎದುರು 67.13 ರು.ಗೆ ತಲುಪಿದೆ. ಇದು ಕಳೆದ 15 ತಿಂಗಳಲ್ಲೇ ರೂಪಾಯಿಯ ಕನಿಷ್ಠ ಮೌಲ್ಯವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 75 ಡಾಲರ್ ದಾಟಿದ ಬೆನ್ನಲ್ಲೇ, ಡಾಲರ್‌ಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಸೋಮವಾರ ರೂಪಾಯಿ ಮೌಲ್ಯ 26 ಪೈಸೆ ಕುಸಿತ ಕಂಡಿದೆ. 

ಕಳೆದ ಜನವರಿಯಿಂದೀಚೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಒಟ್ಟಾರೆ 5.10 ರು. ಕುಸಿತ ಕಂಡಿದೆ.