ಬಿಎಸ್​ವೈ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹತ್ಯೆಯಾದ ಬಿಜೆಪಿ ಮುಖಂಡರ ಕುಟುಂಬದ ಜೊತೆಗೂಡಿ ಗಾಂಧಿಪ್ರತಿಮೆ ಎದುರು ಇಡೀ ದಿನ ಪ್ರತಿಭಟನೆ ನಡೆಯಲಿದೆ

ಬೆಂಗಳೂರು (ಅ.19): ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣವು ದಿನೇ ದಿನೇ ರಾಜಕೀಯಗೊಳ್ಳುತ್ತಾ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊನ್ನೆ ಶಿವಾಜಿನಗರದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ, ನಿನ್ನೆ ರುದ್ರೇಶ್ ಶವಯಾತ್ರೆ ನಡೆಸಿತ್ತು. ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಬಿಎಸ್​ವೈ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹತ್ಯೆಯಾದ ಬಿಜೆಪಿ ಮುಖಂಡರ ಕುಟುಂಬದ ಜೊತೆಗೂಡಿ ಗಾಂಧಿಪ್ರತಿಮೆ ಎದುರು ಇಡೀ ದಿನ ಪ್ರತಿಭಟನೆ ನಡೆಯಲಿದೆ. ಬಳಿಕ ರಾಜ್ಯಪಾಲರಿಗೆ ಈ ಬಗ್ಗೆ ದೂರು ನೀಡಲಿದ್ದಾರೆ.