ಇದಲ್ಲದೇ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರ ಕುರ್ತಾಗಳನ್ನೂ ಸಿದ್ಧಪಡಿಸಿದೆ. ಕಾಮಧೇನು ಎಂದು ಹೆಸರಿಸಲಾಗುವ ಗೋವಿನ ಗಂಜಲಿನಿಂದ ತಯಾರಾದ ವಸ್ತುಗಳು ಶೀಘ್ರದಲ್ಲೇ ಗ್ರಾಹಕರಿಗೆ ಲಭ್ಯವಾಗಲಿವೆ.

ಆಗ್ರಾ: ಮಥುರಾದ ಫರಾಹ್‌ನಲ್ಲಿರುವ ಆರ್‌ಎಸ್‌ಎಸ್‌ ನಿರ್ವಹಿಸುವ ದೀನ ದಯಾಳ್‌ ಧಾಮ್‌ ಫರ್ಮಾಕ್ಯುಟಿ ಕಲ್‌ ಪ್ರಯೋಗಾಲಯವು, ಗೋವಿನ ಮೂತ್ರದಿಂದ ತಯಾರಿಸಲಾದ ವೈದ್ಯಕೀಯ ಸಾಮಗ್ರಿಗಳು ಮತ್ತು ರಸಗೊಬ್ಬರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಲ್ಲದೇ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರ ಕುರ್ತಾಗಳನ್ನೂ ಸಿದ್ಧಪಡಿಸಿದೆ. ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ದೀನ ದಯಾಳ್‌ ಧಾಮ್‌ನ ಸಹಾಯಕ ಕಾರ್ಯದರ್ಶಿ ಮನಿಷ್‌ ಗುಪ್ತ, ‘ಕಾಮಧೇನು ಎಂದು ಹೆಸರಿಸಲಾಗುವ ಗೋವಿನ ಗಂಜಲಿನಿಂದ ತಯಾರಾದ ವಸ್ತುಗಳು ಶೀಘ್ರದಲ್ಲೇ ಗ್ರಾಹಕರಿಗೆ ಲಭ್ಯವಾಗಲಿವೆ. ಯಾವುದೇ ರಸಾಯನಿಕ ಅಂಶಗಳನ್ನು ಬಳಸದ ಕೇವಲ ಗೋವಿನ ಗಂಜಲು ಮತ್ತು ಸಗಣಿ ಬಳಕೆ ಮಾಡಿದ ಸೋಪ್‌, ಮುಖದ ತ್ವಚೆಗೆ ಬಳಸುವ ದ್ರವ್ಯ ಮತ್ತು ಸುಗಂಧ ದ್ರವ್ಯಗಳು ಇವೆ,' ಎಂದಿದ್ದಾರೆ.