ಹಿಂದೆ ಪಕ್ಷದಲ್ಲಿ ಭಿನ್ನಮತ ಕಾಣಸಿಕೊಂಡಾಗಲೆಲ್ಲ ಸಂಘ ಪರಿವಾರದ ಮುಖಂಡರು ಬಿಜೆಪಿ ನಾಯಕರನ್ನು ಕರೆದು ಸಮಾಲೋಚನೆ ನಡೆಸುವ ಮೂಲಕ ಬಿಕ್ಕಟ್ಟು ನಿವಾರಿಸಲು ಪ್ರಯತ್ನಿಸುತ್ತಿದ್ದರು.

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಬೀದಿಗೆ ಬಂದರೂ ಪಕ್ಷದ ಮಾತೃಸಂಸ್ಥೆ ಎಂದೇ ಗುರುತಿಸಲ್ಪಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮಾತ್ರ ಮೌನಕ್ಕೆ ಶರಣಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಗಂತ ಆರ್‌ಎಸ್‌ಎಸ್‌ ಈ ಬಗ್ಗೆ ಹೇಳಿಕೆ ನೀಡಬೇಕಿತ್ತು ಎಂದರ್ಥವಲ್ಲ. ಹಿಂದೆ ಪಕ್ಷದಲ್ಲಿ ಭಿನ್ನಮತ ಕಾಣಸಿಕೊಂಡಾಗಲೆಲ್ಲ ಸಂಘ ಪರಿವಾರದ ಮುಖಂಡರು ಬಿಜೆಪಿ ನಾಯಕರನ್ನು ಕರೆದು ಸಮಾಲೋಚನೆ ನಡೆಸುವ ಮೂಲಕ ಬಿಕ್ಕಟ್ಟು ನಿವಾರಿಸಲು ಪ್ರಯತ್ನಿಸುತ್ತಿದ್ದರು.

ಆದರೆ, ಇತ್ತೀಚೆಗೆ ಅದು ಸಂಪೂರ್ಣವಾಗಿ ನಿಂತು ಹೋಗಿದೆ.ರಾಜ್ಯ ಬಿಜೆಪಿಯ ನಾಯಕರೂ ಈಗ ಸಂಘ ಪರಿವಾರದ ಮುಖಂಡರನ್ನು ಮೊದಲಿನಂತೆ ಪ್ರಮುಖವಾಗಿ ಪರಿಗಣಿಸುವುದಿಲ್ಲ. ಹಾಗಾಗಿ ಸಂಘ ಮೌನವಾಗಿದೆ ಎನ್ನಲಾಗಿದೆ.