ನಗರದ ಉಲ್ಲಾಳದ ಕೋಟೆಕಾರು ಪೆಟ್ರೋಲ್ ಬಂಕ್​ನಲ್ಲಿ ರಫೀಕ್'ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮೊದಲು ಫೈರಿಂಗ್ ಮಾಡಿ ನಂತರ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಮಂಗಳೂರು(ಫೆ.15): ಬೆಂಗಳೂರಿನ ಶೂಟೌಟ್ ನಂತರ ಈಗ ಮಂಗಳೂರಿನಲ್ಲಿ ರಕ್ತದೋಕುಳಿ ಆರಂಭವಾಗಿದೆ. ನಟೋರಿಯಸ್ ರೌಡಿ ಕಾಸರಗೋಡು ಉಪ್ಪಳದ ಕಾಲಿಯಾ ರಫೀಕ್'ನನ್ನು(35) ಗುಂಡಿಕ್ಕಿ ಕೊಲೆ ಮಾಡಲಾಗಿದೆ. ನಗರದ ಉಲ್ಲಾಳದ ಕೋಟೆಕಾರು ಪೆಟ್ರೋಲ್ ಬಂಕ್​ನಲ್ಲಿ ರಫೀಕ್'ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮೊದಲು ಫೈರಿಂಗ್ ಮಾಡಿ ನಂತರ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ರಫೀಕ್ ಸೇರಿ ನಾಲ್ವರು ಕಾರಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ದಾಳಿಯ ಸಂದರ್ಭದಲ್ಲಿ ರಫೀಕ್ ಸಂಬಂಧಿ ಜಾಹಿದ್ ಮೇಲೂ ಕೂಡ ದಾಳಿ ನಡೆಸಲಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾಲಿಯಾ ರಫೀಕ್ ಮೇಲೆ ಕರ್ನಾಟಕ, ಕೇರಳ ಸೇರಿ ಕೊಲೆ,ಕೊಲೆ ಯತ್ನ, ಸುಲಿಗೆ ಸೇರಿದಂತೆ 45ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

Add Asianetnews Kannada as a Preferred SourcegooglePreferred