ವಿಸಿಟರ್ ಭೇಟಿ ಮಾಡುವ ಜಾಗದಲ್ಲಿ 2 ಸಿಸಿಕ್ಯಾಮೆರಾಗಳಿದೆ. 7 ಹಾಗು 8 ನೇ ನಂಬರ್ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳಿಲ್ಲ. ಯಾರು ಯಾರನ್ನ ಯಾವಾಗ ಭೇಟಿ ಆಗಿದ್ದಾರೆಂಬ ದಾಖಲೆಗಳಿಲ್ಲ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂಬ ಅಂಶ ಉಲ್ಲೇಖ.

ಬೆಂಗಳೂರು(ಜು.15):ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ಕುರಿತು ಡಿಐಜಿ ಡಿ.ರೂಪ ಅವರು ಡಿಜಿಪಿ ಸತ್ಯನಾರಾಯಣರಾವ್​ಗೆ ಸಲ್ಲಿಸಲಿರುವ 2ನೇ ವರದಿ ಪ್ರತಿ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.

2ನೇ ವರದಿಯಲ್ಲಿ 5 ಪ್ರಶ್ನೆಗಳನ್ನು ಎತ್ತಿರುವ ರೂಪ

1) ಶಶಿಕಲಾ, ತೆಲಗಿ ಸೇರಿದಂತೆ ಗಣ್ಯರಿಗೆ ನೀಡಿದ್ದ ಸವಲತ್ತಿನ ಸಾಕ್ಷ್ಯ ನಾಶ ಏಕೆ ? ಪ್ರಕರಣ ಬೆಳಕಿಗೆ ಬಂದ ನಂತರವೂ ಜೈಲಿನ ಎಸ್​ಪಿ ಅಮಾನತುಗೊಳಿಸಿಲ್ಲ ಏಕೆ?

2) ವಿಸಿಟರ್ ಭೇಟಿ ಮಾಡುವ ಜಾಗದಲ್ಲಿ 2 ಸಿಸಿಕ್ಯಾಮೆರಾಗಳಿದೆ. 7 ಹಾಗು 8 ನೇ ನಂಬರ್ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳಿಲ್ಲ. ಯಾರು ಯಾರನ್ನ ಯಾವಾಗ ಭೇಟಿ ಆಗಿದ್ದಾರೆಂಬ ದಾಖಲೆಗಳಿಲ್ಲ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂಬ ಅಂಶ ಉಲ್ಲೇಖ.

3) ಶಶಿಕಲಾ ತನ್ನ ಆಪ್ತರನ್ನ ಭೇಟಿ ಮಾಡುವ ರೀತಿ ಹೇಗಿರುತ್ತೇ.ಒಂದು ಕುರ್ಚಿ, ಅದರ ಮುಂದೆ ಟೇಬಲ್, ನಾಲ್ಕು ಚೇರ್ ಇದೆಲ್ಲಾ ಇರೋ ಸ್ಪೆಶಲ್ ಕೊಠಡಿಯಲ್ಲಿ ಶಶಿಕಲಾ ಭೇಟಿ? ಭೇಟಿ ಮಾಡುತ್ತಿದ್ದ ಬಗ್ಗೆ ಜೈಲಿನ ಅದಿಕಾರಿಯಿಂದ ಮಾಹಿತಿ ಖುದ್ದು ಜೈಲಿನ ಅಧಿಕಾರಿಯಿಂದ ಡಿಐಜಿ ರೂಪಾಗೆ ದೂರು.

4) ಶಶಿಕಲಾ ಇರುವ ಬ್ಯಾರೆಕ್ ಬಳಿ ಸಿಸಿಟಿವಿ ಅಳವಡಿಸುವ ಬಗ್ಗೆ ಜೈಲಿನ ಒಳಗಡೆ ಡಿಐಜಿ ಓಡಾಡಿದ್ದ ವಿಡಿಯೋ ಡೆಲಿಟ್ ಡಿಐಜಿ ರೂಪಾ ಭೇಟಿ ಕೊಟ್ಟಿರುವಾಗ ಸೆರೆಯಾಗಿದ್ದ ವಿಡಿಯೋ. ಜೈಲಿಗೆ ತೆರಳುವಾಗ ಕ್ಯಾಮೆರಾ ಬಿಟ್ಟು ಹೋಗಿದ್ದ ರೂಪಾ ಅವರು ಜೈಲಿನ ಕ್ಯಾಮೆರಾದಲ್ಲಿ ಅಕ್ರಮಗಳ ಬಗ್ಗೆ ರೆಕಾರ್ಡ್ ಮಾಡಿಸಿದ್ದರು.

5) ರೆಕಾರ್ಡ್ ಆಗಿರುವುದರಲ್ಲಿ ಕೆಲ ವಿಡಿಯೋ ಡೆಲಿಟ್ ಆಗಿದ್ಯಾ ಡೆಲಿಟ್ ಮಾಡಿ ಸಾಕ್ಷ್ಯಗಳ ನಾಶ ಮಾಡಲು ಯತ್ನ ಅದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ.