ಬೆಂಗಳೂರು (ಫೆ.15): ಪುಲ್ವಾಮಾ ಉಗ್ರ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಈ ಹೇಯ ಕೃತ್ಯವನ್ನು ಖಂಡಿಸಿದ್ದಾರೆ. ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. 

22 ದಿನದ ಮಗು ನೋಡದ ಹುತಾತ್ಮ: ಪ್ರತಿಯೊಬ್ಬರದ್ದೂ ನೋವಿನ ಕತೆ

 

ನಮ್ಮ ದೇಶಕ್ಕೆ ಇದೊಂದು ಕೆಟ್ಟ ಘಳಿಗೆ. ನಾವು 44 ಯೋಧರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಯೋಧರ ತ್ಯಾಗ, ಬಲಿದಾನವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಭಯೋತ್ಪಾದಕರ ಈ ಕೃತ್ಯವನ್ನು ಖಂಡಿಸುತ್ತೇನೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. 

 

ಅಂತೂ ಹುತಾತ್ಮರಿಗೆ ನಮನ ಸಲ್ಲಿಸಿದ ಕೊಹ್ಲಿ!

ನಟ ಪ್ರಕಾಶ್ ರೈ ಈ ಕೃತ್ಯವನ್ನು ಖಂಡಿಸಿದ್ದಾರೆ. ಪುಲ್ವಾಮಾ ದಾಳಿ ಆಘಾತ ತಂದಿದೆ. ಈ ದುರಂತವನ್ನು ರಾಜಕೀಯಗೊಳಿಸಬೇಡಿ. ನಾಗರೀಕ ಸಮಾಜ ಹಾಗೂ ಸರ್ಕಾರ ಒಟ್ಟಾಗಿ ಪರಿಹಾರವನ್ನು ಹುಡುಕಬೇಕು ಎಂದು ಹೇಳಿದ್ದಾರೆ.