ನವದೆಹಲಿ (ಸೆ.13) ಆ್ಯಪಲ್ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಭಾರತಕ್ಕೆ ಕಾಲಿಟ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಈ ಫೋನ್ ಗಳನ್ನು ಕೊಂಡೂಯ್ಯುತ್ತಿದ್ದ ಟ್ರಕ್ ಮೇಲೆ ದಾಳಿ ಮಾಡಿ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ರೂ.60 ಸಾವಿರ ಮೌಲ್ಯದ ಫೋನುಗಳನ್ನು ದುಷ್ಕರ್ಮಿಗಳು ವಶಪಡಿಸಿಕೊಂಡಿದ್ದಾರೆ.

ರಾಜಧಾನಿ ದೆಹಲಿಯ ವಸಂತ್ ಕುಂಜಿ ಸಮೀತ ಈ ಘಟನೆ ನಡೆದಿದೆ. ಟ್ರಕ್ಕನ್ನು ವಶಪಡಿಸಿಕೊಂಡ ನಂತರ ರಂಗಪುರ್ ಪಹಾಡಿಗೆ ಕೊಂಡೊಯ್ದಿದ್ದಾರೆ. ಅಲ್ಲಿಂದ ತಮ್ಮ ಸ್ವಂತ ವಾಹನದಲ್ಲಿ ರೂ.2.5 ಕೋಟಿ ಮೌಲ್ಯದ 950 ಫೋನ್ ಗಳನ್ನು ಬೇರೆಡೆಗೆ ಸಾಗಿಸಿದ್ದಾರೆ.

ಟ್ರಕ್ ಚಾಲಕ ಕಲಾಂ ಸಿಂಗ್ ವಸಂತ್ ಕುಂಜಿ ಪೊಲೀಸ್ ಸ್ಟೇಶನ್ ನ ಸಂಪರ್ಕಿಸಿ ದರೋಡೆಯಾಗಿರುವ ಮಾಹಿತಿ ನೀಡಿದ್ದಾರೆ.