ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿರುವುದಕ್ಕೆ ಕೇಂದ್ರ ಸರ್ಕಾರ ಪುರಾವೆ ಒದಗಿಸಬೇಕೆಂದು ಆಗ್ರಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್’ ಅವರನ್ನು ಚಲನಚಿತ್ರ ನಿರ್ದೇಶಕ ರಾಮಗೋಪಾಲ್ ವರ್ಮಾ ಕೋತಿಗೆ ಹೋಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೇನೆಯ ಬದ್ಧತೆಯನ್ನು ಸಂಶಯಿಸಿ, ಕೇಜ್ರಿವಾಲ್ ತಾನು ಹನುಮಂತ ಹಾಗೂ ಮುಶರಫ್ ನವಾಝ್ ಶರೀಫ್’ಗಳ ಮಿಶ್ರತಳಿಯೆಂದು ಸಾಬೀತು ಪಡಿಸಿದ್ದಾರೆ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

ಸೇನೆಯು ಗಡಿಯ ಹೊರಗೆ ಸರ್ಜಿಕಲ್ ದಾಳಿ ಮಾಡುವುದರ ಜೊತೆಗೆ ದೇಶದೊಳಗೂ ಕೇಜ್ರಿವಾಲ್’ರಂತಹ ದೇಶ-ವಿರೋಧಿಗಳ ಮೇಲೂ ಸರ್ಜಿಕಲ್ ದಾಳಿ ಮಾಡಬೇಕೆಂದು ವರ್ಮಾ ಹೇಳಿದ್ದಾರೆ.

ಮಫ್ಲರ್ ಧರಿಸಕೊಂಡಿರುವ ಅವರು ಯಾವಾಗಲೂ ಕೋತಿಯಂತೆ ಕಾಣುತ್ತಿದ್ದರು, ಆದರೆ ಸೇನೆ ಬಗ್ಗೆ ಅವರ ಹೇಳಿಕೆ ಕೇಳಿದ ಬಳಿಕ ಅವರು ಕೋತಿಯೆಂದು ಖಾತ್ರಿಯಾಗಿದೆ, ಎಂದು ರಾಮಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

 ಆದರೆ ಕೇಜ್ರಿವಾಲ್ ಈವರೆಗೆ ವರ್ಮಾ ಟ್ವೀಟ್’ಗೆ ಏನು ಪ್ರತಿಕ್ರಿಯೆ ನೀಡಿಲ್ಲ.