ಒಟ್ಟು 58 ಸದಸ್ಯರ ಬಲ ಹೊಂದಿರುವ ಸದಸ್ಯರ ಪೈಕಿ ಕನ್ನಡಿಗ, ವಾರ್ಡ್ ನಂ.55ರ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರೊಬ್ಬರೇ ಎಸ್‌ಟಿ ಅಭ್ಯರ್ಥಿಯಾಗಿರುವುದರಿಂದ ನಿರಾಯಾಸವಾಗಿ ಅವರಿಗೆ ಮೇಯರ್ ಪಟ್ಟ ಒಲಿದು ಬಂದಿದೆ

ಬೆಳಗಾವಿ(ಜ.04): ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ ಈ ಬಾರಿ ಕನ್ನಡಿಗರ ಪಾಲಿಗೆ ಒಲಿದು ಬಂದಿದೆ. ಮೇಯರ್, ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ಮೇಯರ್ ಸ್ಥಾನ ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಉಪಮೇಯರ್ ಸ್ಥಾನ ಬಿಸಿಎ ಮಹಿಳಾ ಮೀಸಲಾತಿ ನೀಡಿ ಆದೇಶ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಲಿಕೆಯ ಆಡಳಿತದ ಚುಕ್ಕಾಣಿ ಮರಾಠಿಗರ ಹಿಡಿತದಲ್ಲಿದೆ. ಏನೇ ಇದ್ದರೂ ಇಲ್ಲಿ ಪಕ್ಷ ಗೌಣ. ಇಲ್ಲಿ ಗಡಿ ವಿವಾದ, ಭಾಷೆ, ಗುಂಪುಗಾರಿಕೆ ರಾಜಕೀಯ ನಡೆಯುತ್ತದೆ. ಒಟ್ಟು 58 ಸದಸ್ಯರ ಬಲ ಹೊಂದಿರುವ ಸದಸ್ಯರ ಪೈಕಿ ಕನ್ನಡಿಗ, ವಾರ್ಡ್ ನಂ.55ರ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರೊಬ್ಬರೇ ಎಸ್‌ಟಿ ಅಭ್ಯರ್ಥಿಯಾಗಿರುವುದರಿಂದ ನಿರಾಯಾಸವಾಗಿ ಅವರಿಗೆ ಮೇಯರ್ ಪಟ್ಟ ಒಲಿದು ಬಂದಿದೆ. ಇದು ಸಹಜವಾಗಿಯೇ ಕನ್ನಡಪರ ಸಂಘಟನೆಗಳ ಸಂತಸಕ್ಕೆ ಕಾರಣವಾಗಿದೆ.