Asianet Suvarna News Asianet Suvarna News

ಭಾರತದಲ್ಲಿ ಒಬ್ಬರಿಗಿರೋದು 28 ಮರ ಮಾತ್ರ!

ಆಧುನೀಕರಣ, ನಗರೀಕರಣ, ಜನಸಂಖ್ಯೆ ಏರಿಕೆಯ ಪರಿಣಾಮ ದಿನೇದಿನೇ ಕಾಡು ನಾಶವಾಗುತ್ತಿದೆ. ಭೂಮಿಯ ಶ್ವಾಸಕೋಶವಾದ ಅಮೆಜಾನ್‌ ಕಾಡುಗಳು ಅಪಾಯದಂಚಿನಲ್ಲಿವೆ. ಅರಣ್ಯನಾಶದ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅಂತಿಮವಾಗಿ ಜಗತ್ತಿನಲ್ಲಿ ಈಗ ಎಷ್ಟುಮರಗಳು ಉಳಿದಿವೆ? 

Report says World losing area of forest in each year
Author
Bengaluru, First Published Sep 22, 2019, 2:07 PM IST

ಆಧುನೀಕರಣ, ನಗರೀಕರಣ, ಜನಸಂಖ್ಯೆ ಏರಿಕೆಯ ಪರಿಣಾಮ ದಿನೇದಿನೇ ಕಾಡು ನಾಶವಾಗುತ್ತಿದೆ. ಭೂಮಿಯ ಶ್ವಾಸಕೋಶವಾದ ಅಮೆಜಾನ್‌ ಕಾಡುಗಳು ಅಪಾಯದಂಚಿನಲ್ಲಿವೆ. ಅರಣ್ಯನಾಶದ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅಂತಿಮವಾಗಿ ಜಗತ್ತಿನಲ್ಲಿ ಈಗ ಎಷ್ಟುಮರಗಳು ಉಳಿದಿವೆ?

ಗೋಮಾಂಸ ಸೇವನೆಯಿಂದ ಹೆಚ್ಚುತ್ತಿದೆ ಕಾಳ್ಗಿಚ್ಚು; ಕಾಡಿಗೆ ಇಡಬೇಡಿ ಕಿಚ್ಚು!

ಅತಿ ಹೆಚ್ಚು ಮರಗಳಿರುವ ಟಾಪ್‌ 5 ರಾಷ್ಟ್ರಗಳು

ರಷ್ಯಾ 69,834 ಕೋಟಿ

ಕೆನಡಾ 36,120 ಕೋಟಿ

ಬ್ರೆಜಿಲ್‌ 33,816 ಕೋಟಿ

ಅಮೆರಿಕ 22,286 ಕೋಟಿ

ಚೀನಾ 17,753

ವಿಶ್ವದ ‘ಶ್ವಾಸಕೋಶ’ದಲ್ಲಿ ಕಾಡ್ಗಿಚ್ಚು: ಧಗ ಧಗ ಉರಿಯುತ್ತಿದೆ ಅಮೆಜಾನ್‌ ಕಾಡು!

ಭಾರತದಲ್ಲಿರುವ ಒಟ್ಟು ಮರಗಳು 3,518 ಕೋಟಿ ಜಗತ್ತಿನಲ್ಲಿ 17ನೇ ಸ್ಥಾನ

-ಭಾರತದಲ್ಲಿ ಪ್ರತಿ ಚ.ಕಿ.ಮೀ.ಗೆ ಇರುವ ಮರಗಳು 11,109

ಜಗತ್ತಿನಲ್ಲಿ 103ನೇ ಸ್ಥಾನ

-ಭಾರತದಲ್ಲಿ ಒಬ್ಬ ವ್ಯಕ್ತಿಗೆ ಇರುವ ಮರ 28

ಜಗತ್ತಿನಲ್ಲಿ 125 ನೇ ಸ್ಥಾನ ನೆರೆ ರಾಷ್ಟ್ರಗಳಲ್ಲಿ ಹೇಗಿದೆ?

ದೇಶ ಗ್ಲೋಬಲ್‌ ರಾರ‍ಯಂಕ್‌ ಮರಗಳು ಒಬ್ಬ ವ್ಯಕ್ತಿಗೆ ಇರುವ ಮರ

ಚೀನಾ 5 17,753 ಕೋಟಿ 130

ಶ್ರೀಲಂಕಾ 82 244 ಕೋಟಿ 118

ಪಾಕಿಸ್ತಾನ 99 99 ಕೋಟಿ 06

ಬಾಂಗ್ಲಾದೇಶ 107 96 ಕೋಟಿ 05

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಒಬ್ಬರಿಗೆ 1 ಮರವೂ ಇಲ್ಲ!

ಮಧ್ಯಪ್ರಾಚ್ಯದ 7 ದೇಶಗಳಲ್ಲಿ ಒಬ್ಬ ವ್ಯಕ್ತಿಗೆ ಒಂದು ಮರಕ್ಕಿಂತ ಕಡಿಮೆ ಇವೆ. ಇನ್ನು ಒಂದು ಚದರ ಕಿ.ಮೀ. ಪ್ರದೇಶದಲ್ಲಿ ಒಂದು ಮರಕ್ಕಿಂತ ಕಡಿಮೆ ಇರುವ ಏಕೈಕ ದೇಶ ಯುಎಇ.

ಒಬ್ಬರಿಗೆ ಅತಿ ಹೆಚ್ಚು ಮರ ಹೊಂದಿರುವ ದೇಶಗಳು

*ಉತ್ತರ ಅಮೆರಿಕ

ಕೆನಡಾ 10,163

ಅಮೆರಿಕ 699

ಪನಾಮಾ 577

*ದಕ್ಷಿಣ ಅಮೆರಿಕ

ಅಮೆಜಾನ್‌ನಲ್ಲಿ ಭಯಂಕರ ಕಾಡ್ಗಿಚ್ಚು: ಉಪಗ್ರಹದ ಕಣ್ಣಿಗೂ ಹೊಗೆ ಕಾಣಿಸ್ತು!

ಬೊಲಿವಿಯಾ 5,480

ಪರಗ್ವೆ 3,100

ಬ್ರೆಜಿಲ್‌ 1674

*ಯುರೋಪ್‌

ಫಿನ್‌ಲೆಂಡ್‌ 5,567

ಸ್ವೀಡನ್‌ 4,214

ಈಸ್ಟೋನಿಯಾ 3,240

*ಏಷ್ಯಾ

ರಷ್ಯಾ 4,856

ಆಸ್ಪ್ರೇಲಿಯಾ 3,666

ಪಪುವಾ ನ್ಯೂ ಗಿನಿಯಾ 3063

*ಆಫ್ರಿಕಾ

ಗೆಬೊನ್‌ 7,021

ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ 5,021

ಬೋಟ್ಸಾ$್ವನಾ 3,969

Follow Us:
Download App:
  • android
  • ios