ಜಿಯೋನಿಂದ ಮತ್ತೊಂದು ಸೂಪರ್ ಬಂಪರ್ ಆಫರ್

Reliance Jio offers Rs 1800 cashback on purchase of Oppo 4G handsets
Highlights

  • ಒಪ್ಪೋ ಸಂಸ್ಥೆಯ 4ಜಿ ಸ್ಮಾರ್ಟ್ ಫೋನ್'ಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ 1,800ರೂ. ಕ್ಯಾಶ್ ಬ್ಯಾಕ್ 
  • ಸೆ.25, 2018ಕ್ಕೆ ಮುನ್ನ ರೂ. 198 ಅಥವಾ ರೂ. 299 ರೀಚಾರ್ಜ್ ಮಾಡಿಸುವ ಮೂಲಕ ಈ ಆಫರ್ ಪಡೆಯಬಹುದು 

ಮುಂಬೈ[ಜು.02]: ರಿಲಯನ್ಸ್ ಜಿಯೋ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಮತ್ತೊಂದು ಹೊಸ ಬಂಪರ್ ಅಫರ್ ಪರಿಚಯಿಸಿದೆ.

ಒಪ್ಪೋ ಸಂಸ್ಥೆಯ 4ಜಿ ಸ್ಮಾರ್ಟ್ ಫೋನ್'ಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ ಕೊಡುಗೆಯಾಗಿ ರೂ. 1,800ರೂ. ಕ್ಯಾಶ್ ಬ್ಯಾಕ್ ನೀಡುತ್ತಿದೆ. ಒಪ್ಪೋ 4ಜಿ ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ ಈ ಕ್ಯಾಶ್ ಬ್ಯಾಕ್ ಜೊತೆಗೆ ಜಿಯೋನಿಂದ ರೂ. 3,100 ಹೆಚ್ಚುವರಿ ಆಫರ್ ಗಳನ್ನು ನೀಡಲಾಗುತ್ತದೆ. 

'ರಿಯಲ್ಮಿ' ಬ್ರಾಂಡಿನ ಫೋನುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಒಪ್ಪೋ ಮೊಬೈಲ್ ಖರೀದಿಸುವ ಎಲ್ಲ ಹಳೆಯ ಹಾಗೂ ಹೊಸ ಜಿಯೋ ಗ್ರಾಹಕರಿಗೆ ಈ ಕ್ಯಾಶ್ ಬ್ಯಾಕ್ ದೊರೆಯಲಿದೆ. 

ಸೆ. 25, 2018ಕ್ಕೆ ಮುನ್ನ ರೂ. 198 ಅಥವಾ ರೂ. 299 ರೀಚಾರ್ಜ್ ಮಾಡಿಸುವ ಮೂಲಕ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು. ಮೊದಲ ಯಶಸ್ವಿ ರೀಚಾರ್ಜ್ ನಂತರ ಗ್ರಾಹಕರು ತಮ್ಮ ಮೈಜಿಯೋ ಆಪ್'ನಲ್ಲಿ ತಲಾ ರೂ. 50ರ 36 ವೋಚರ್  ರೂ.ಗಳನ್ನು ಪಡೆಯಲಿದ್ದು, ಆ ವೋಚರ್ ಗಳನ್ನು ಭವಿಷ್ಯದ ರೂ.198 ಅಥವಾ ರೂ. 299 ರೀಚಾರ್ಜ್'ಗಳ ಮೇಲೆ ರಿಯಾಯಿತಿ ಪಡೆಯಲು ಪ್ರತಿ ಬಾರಿಗೆ ಒಂದರಂತೆ ಬಳಸಬಹುದಾಗಿದೆ.

ಜೊತೆಗೆ 36  ತಿಂಗಳುಗಳ ಅವಧಿಯಲ್ಲಿ ರೂ.198 ಅಥವಾ ರೂ. 299ರ 39 ರೀಚಾರ್ಜ್ ಗಳನ್ನು ಮಾಡಿಸುವ ಗ್ರಾಹಕರು ತಮ್ಮ ಜಿಯೋ ಮನಿ ಖಾತೆಯಲ್ಲಿ ರೂ. 1,800ರ ಕ್ರೆಡಿಟ್ ಪಡೆಯಲಿದ್ದಾರೆ. ಈ ಮೊತ್ತವನ್ನು ಜಿಯೋ ಮನಿ ಸ್ವೀಕರಿಸುವ ಎಲ್ಲ ಸ್ಥಳಗಳಲ್ಲೂ ಬಳಸಬಹುದು.

loader