ಉಚಿತ ಅಂತ ಸಿಕ್ಕಪಟ್ಟೆ ಡೇಟಾ ಮತ್ತು ಕಾಲ್ ಬಳಕೆ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಜಿಯೋ 27,718 ರೂಗಳ ಬಿಲ್ ಕಳುಹಿಸಿದೆ ಜಿಯೋ

ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸಿದ ಜಿಯೋ, ತನ್ನ ಗ್ರಾಹಕರಿಗೆ ಉಚಿತ ಸೇವೆಗಳನ್ನು ನೀಡಿತ್ತು. ಮಾರುಕಟ್ಟೆಯಲ್ಲಿ 1 ಜಿಬಿ 3ಜಿ ಡೇಟಾಗೆ 200ರೂ. ಗಿಂತಲೂ ಅಧಿಕವಿರುವ ಸಮಯದಲ್ಲಿ 4ಜಿ ಡೇಟಾವನ್ನು ಉಚಿತವಾಗಿ ಬಳಸಿ ಎಂದು ಆಫರ್ ಮಾಡಿತ್ತು, ಉಚಿತವಾಗಿ ಕರೆ ಮಾಡಿ ಹಾಗೂ ಎಸ್ ಎಂಎಸ್ ಕಳುಹಿಸುವ ಅವಕಾಶವನ್ನು ನೀಡಿತ್ತು.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ಉಚಿತ ಅಂತ ಸಿಕ್ಕಪಟ್ಟೆ ಡೇಟಾ ಮತ್ತು ಕಾಲ್ ಬಳಕೆ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಜಿಯೋ 27,718 ರೂಗಳ ಬಿಲ್ ಕಳುಹಿಸಿದೆ ಎಂದು. ಆಧಾರ್ ಕಾರ್ಡ್ ನಲ್ಲಿರುವ ವಿಳಾಸಕ್ಕೆ ಬಿಲ್ ಕಳುಹಿಸಲಾಗಿದೆ ಎಂಬ ಸಂದೇಶಗಳು ಫೇಸ್'ಬುಕ್ ಹಾಗೂ ವಾಟ್ಸಪ್'ನಲ್ಲಿ ಹರಿದಾಡುತ್ತಿದೆ. ಇದರೊಂದಿಗೆ ಬಿಲ್ ನ ಪೋಟೋಕಾಪಿಯನ್ನು ಸಹ ಹಾಕಲಾಗಿದೆ. 

ಆದರೆ ಈ ಕುರಿತು ಮಾಹಿತಿ ನೀಡಿರುವ ಜಿಯೋ ತಂಡ ಇದೊಂದು ನಕಲಿ ಬಿಲ್ ಆಗಿದ್ದು, ಡಿ.31ರ ವರೆಗೂ ಜಿಯೋ ಬಳಕೆ ಉಚಿತವಾಗಿದ್ದು, ಗ್ರಾಹಕರಿಗೆ ಯಾವುದೇ ರೀತಿಯಲ್ಲು ಬಿಲ್ ಕಳಿಸುವುದಾಗಲಿ, ಹಣ ಪಾವತಿಸಿ ಎಂದು ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ ಎಂದಿದ್ದಾರೆ.