ಎನ್‌ಕೌಂಟರ್‌ನಲ್ಲಿ ಹತರಾಗಿರುವ ತಮ್ಮವರಿಗೆ ನ್ಯಾಯ ಒದಗಿಸಿ ಕೊಡುವಂತೆ ಮೃತಪಟ್ಟವರ ಕುಟುಂಬಸ್ಥರು ನನ್ನ ಬಳಿ ಬಂದಿದ್ದರು. ಇದರಿಂದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮಧ್ಯ ಪ್ರದೇಶ ಹೈಕೋರ್ಟ್‌ಗೆ ಮೊರೆ ಹೋಗುವುದಾಗಿ ವಕೀಲ ಪರ್ವೆಜ್‌ ಅಲಮ್‌ ತಿಳಿಸಿದ್ದಾರೆ.

ಭೋಪಾಲ್ (ನ.01): ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತರಾಗಿರುವ 8 ಶಂಕಿತ ಸಿಮಿ ಉಗ್ರರ ಕುಟುಂಬಸ್ಥರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಧ್ಯ ಪ್ರದೇಶ ಹೈಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಎನ್‌ಕೌಂಟರ್‌ ಹೆಸರಿನಲ್ಲಿ ನಿರ್ದಯವಾಗಿ ತಮ್ಮವರನ್ನು ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಎನ್‌ಕೌಂಟರ್‌ನಲ್ಲಿ ಹತರಾಗಿರುವ ತಮ್ಮವರಿಗೆ ನ್ಯಾಯ ಒದಗಿಸಿ ಕೊಡುವಂತೆ ಮೃತಪಟ್ಟವರ ಕುಟುಂಬಸ್ಥರು ನನ್ನ ಬಳಿ ಬಂದಿದ್ದರು. ಇದರಿಂದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮಧ್ಯ ಪ್ರದೇಶ ಹೈಕೋರ್ಟ್‌ಗೆ ಮೊರೆ ಹೋಗುವುದಾಗಿ ವಕೀಲ ಪರ್ವೆಜ್‌ ಅಲಮ್‌ ತಿಳಿಸಿದ್ದಾರೆ.

32 ಅಡಿ ಎತ್ತರದ ಜೈಲಿನಿಂದ ತಪ್ಪಿಸಿಕೊಂಡು ಬರುವುದು ಸಾಧ್ಯವೆ?. ಅಲ್ಲದೆ ಈ ಎನ್‌ಕೌಂಟರ್‌ ಶುದ್ಧ ಸುಳ್ಳು. ಹಾಗಾಗಿ ಇದು ನಕಲಿ ಎನ್‌ಕೌಂಟರ್‌ ಎಂದು ಅಲಮ್‌ ಆರೋಪಿಸಿದ್ದಾರೆ.