ಇನ್ನು ಚಾಕೋಲೇಟ್ ಬಣ್ಣದ, ಕೊನಾರ್ಕ್ ಮಂದಿರ ಚಿತ್ರವಿರುವ 10 ರೂ. ನೋಟು ನಿಮ್ಮ ಕೈ ಸೇರಲಿದೆ.

ಮುಂಬಯಿ: ನೋಟು ನಿಷೇಧದ ನಂತರ ಭಾರತೀಯ ಕರೆನ್ಸಿಯಲ್ಲಿ ಅಪಾರ ಬೆಳವಣಿಗೆಗಳಾಗಿದ್ದು, ಇದೀಗ 10 ರೂ.ನೋಟು ಸಹ ಹೊಸದು ಬರಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಾಕೋಲೇಟ್ ಕಲರಿನಲ್ಲಿರುವ ಈ ನೋಟಿನಲ್ಲಿ ಕೊನಾರ್ಕ್ ಸೂರ್ಯ ಮಂದಿರದ ಚಿತ್ರವಿರಲಿದೆ. ಕಳೆದ ವಾರವೇ ಹೊಸ ವಿನ್ಯಾಸದ ನೋಟಿಗೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. 2005ರಲ್ಲಿ 10 ರೂ. ಮೌಲ್ಯದ ಹೊಸ ನೋಟು ಬಂದ ನಂತರ, ಇದರಲ್ಲಿ ಇನ್ಯಾವ ಬದಲಾವಣೆಯೂ ಆಗಿಲ್ಲ. ಕಳೆದ ವರ್ಷದ ಆಗಸ್ಟ್'ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹಾತ್ಮ ಗಾಂಧಿ ಸೀರಿಸ್'ನಲ್ಲಿ ಹೊಸ 50 ರೂ. ಹಾಗೂ 200 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು.

ಹಳೆಯದಾದ, ಹರಿದ 10 ರೂ, 20 ರೂ. ಹಾಗೂ 50 ರೂ.ನೋಟುಗಳನ್ನು ಪಡೆದು, ಬದಲಿ ನೋಟು ನೀಡಿತ್ತು. ಕಡಿಮೆ ಮೌಲ್ಯದ ನೋಟುಗಳು ಹೆಚ್ಚು ಚಲಾವಣೆಯಾಗುವಂತೆ ಮಾಡಲು, ದೈನಂದಿನ ವ್ಯವಹಾರದಲ್ಲಿ ಹೆಚ್ಚು ಬಳಕೆಯಾಗುವಂತೆ ಮಾಡುವ ಉದ್ದೇಶದಿಂದ ಬ್ಯಾಂಕ್ 10 ರೂ. ಮೌಲ್ಯದ ನೋಟುಗಳನ್ನು ಬಿಡುಗಡೆ ಮಾಡುತ್ತಿದೆ.