ಪರಿಶೀಲನೆ ಸಂದರ್ಭದಲ್ಲಿ ರವಿ ಬೆಳಗೆರೆ ಅವರ ಪಾರ್ಮ ಹೌಸ್ ನಲ್ಲಿ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ.
ಪತ್ರಕರ್ತ ರವಿ ಅವರ ಆಸ್ತಿ ಇರುವ ಎಲ್ಲ ಪ್ರದೇಶಗಳಲ್ಲಿ ತನಿಖೆ ನಡೆಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಇನ್ನು ಸಿಸಿಬಿ ಇನ್ಸ್ ಪೆಕ್ಟರ್ ಗಳಾದ ಪುನೀತ್ ಕುಮಾರ್ ಮತ್ತು ಎಚ್ ಡಿ ಕುಲಕರ್ಣಿ ನೇತೃತ್ವದ ಐವರು ಪೊಲೀಸ್ ಅಧಿಕಾರಿಗಳ ತಂಡ ಇಂದು ಉತ್ತಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಜಗಲಬೇಟ ಗ್ರಾಮದ ಬಾರ್ಬೋಜಾದಲ್ಲಿರುವ ಪತ್ರಕರ್ತ ರವಿ ಬೆಳಗೆರೆ ಅವರ ಪಾರ್ಮ್ ಹೌಸ್ ಮೇಲೆ ದಾಳಿ ನಡೆಸಿತ್ತು. ಸಿಸಿಬಿ ಪೊಲೀಸ್ ಅಧಿಕಾರಿಗಳು ಸತತ ಮೂರು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ರು. ಪರಿಶೀಲನೆ ಸಂದರ್ಭದಲ್ಲಿ ರವಿ ಬೆಳಗೆರೆ ಅವರ ಪಾರ್ಮ ಹೌಸ್ ನಲ್ಲಿ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ರವಿ ಬೆಳಗೆರೆ ಭಾರ್ಬೋಜಾದಲ್ಲಿರುವ ಪಾರ್ಮ ಹೌಸ್ ಗೆ ಆಗಾಗ ಬಂದು ವಾಪಸ್ ಆಗುತ್ತಿದ್ರು. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
